Sunday, October 22, 2023

ಏ.30ರವರೆಗೆ ಉಚಿತ ಹಾಲು ವಿತರಣೆ: ರಾಜ್ಯ ಸರ್ಕಾರ

Must read

ಬೆಂಗಳೂರು : ಮಾರಕ ಕೊರೊನಾ ವೈರಸ್ ರಾಜ್ಯದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮೇ.3ರವರೆಗೆ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಸರ್ಕಾರ ಬಡವರಿಗಾಗಿ ಪೂರೈಸಲಾಗುತ್ತಿರುವ ಉಚಿತ ಹಾಲು ವಿತರಣೆಯನ್ನು ಏ.30ರವರೆಗೆ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಡವರಿಗೆ ಉಚಿತವಾಗಿ ನೀಡುತ್ತಿರುವ ಹಾಲು ವಿತರಣೆಯನ್ನು ಏ.30ರವರೆಗೆ ಮುಂದುವರೆಸಲು ತೀರ್ಮಾನಿಸಲಾಯಿತು. ಕೆಎಂಎಫ್ ನಿಂದ ಪ್ರತಿನಿತ್ಯ 7 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಸರ್ಕಾರವೇ ಖರೀದಿಸಿ, ಆ ಪ್ರದೇಶ ವ್ಯಾಪ್ತಿಯ ಕೊಳಚೆ ಪ್ರದೇಶದ ನಿವಾಸಿಗಳು ಹಾಗೂ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸದ್ಯ ಲಾಕ್ ಡೌನ್ ವಿಸ್ತರಿಸಿರುವ ಕಾರಣ ಹಾಲು ವಿತರಣೆಯನ್ನು ಏ.30ರವರೆಗೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಡವರಿಗೆ ಹಾಲು ವಿತರಣೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More articles

Latest article