Thursday, October 19, 2023

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 67 ವರ್ಷದ ವೃದ್ದೆಗೆ ಕೊರೋನಾ ಸೋಂಕು ಪತ್ತೆ: ಆತಂಕದಲ್ಲಿ ಬಂಟ್ವಾಳದ ಜನತೆ!

Must read

ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ಭಾಗದ ವೃದ್ದೆಗೆ ಸೋಂಕು ಪತ್ತೆ ಎಂಬ ಮಾಹಿತಿ ಲಭ್ಯವಾಗಿದೆ. ಭಾನುವಾರ ಮೃತಪಟ್ಟ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆಗಳು ಹೆಚ್ಚು ಇವೆ ಎಂಬ ಮಾಹಿತಿಗಳು ಬರುತ್ತಾ ಇವೆ.

ಭಾನುವಾರ ಮೃತಪಟ್ಟಿದ್ದ ಬಂಟ್ವಾಳದ 42 ವರ್ಷದ ಮಹಿಳೆಯ ಸಂಪರ್ಕದಿಂದ ವೃದ್ದೆಗೆ ಸೋಂಕು ಹರಡಿರುವ ಶಂಕೆಗಳು ಹೆಚ್ಚಾಗುತ್ತಾ ಇದೆ. ಮಹಿಳೆಯ ನೆರೆ ಮನೆಯಲ್ಲೇ ಈ ವೃದ್ದೆ ವಾಸವಾಗಿದ್ದ ಮಾಹಿತಿ ಲಭ್ಯವಾಗಿದೆ.

ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವೃದ್ದೆಗೆ ಚಿಕಿತ್ಸೆ ನೀಡಲಾಗುತ್ತಿದೆ. ದ‌.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16 ಕ್ಕೆ ಏರಿದೆ.
ಜಿಲ್ಲೆಯಲ್ಲಿ ಈವರೆಗೆ ಓರ್ವ ಮಹಿಳೆ ಸಾವನಪ್ಪಿದ್ದು, 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 12 ಮಂದಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ.

More articles

Latest article