ಬಂಟ್ವಾಳ: ಕೋವಿಡ್ 19 ನಿಂದ ಬಂಟ್ವಾಳದ ಮಹಿಳೆಯೋರ್ವರು ಮೃತಪಟ್ಟ ಬಳಿಕ ಅವರ ನೆರೆಮನೆಯ ವೃದ್ದ ಮಹಿಳೆಗೂ ಕೊರೊನಾ ಪಾಸಿಟಿವ್ ದೃಡವಾಗಿದೆ.
ಬಳಿಕ ಮನೆಯ ಸುತ್ತಮುತ್ತಲಿನ 100 ಮೀ ವ್ಯಾಪ್ತಿಯ ನ್ನು ಕಂಟೈನ್ ಮೆಂಟ್ ಏರಿಯಾ ಎಂದು ಘೋಷಣೆ ಮಾಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಈ ಭಾಗದಲ್ಲಿ ಯಾರು ಕೂಡ ಮನೆಯಿಂದ ಹೊರಬರುವಂತಿಲ್ಲ ಅತ್ತ ಕಡೆಗೆ ಹೋಗುವಂತಿಲ್ಲ, ಇವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಲೂಕು ಆಡಳಿತ ವ್ಯವಸ್ಥೆ ಕಲ್ಪಿಸಿದೆ.
ಬಿಸಿರೋಡಿಗೆ ಯಾಕಿಲ್ಲ ಕಡಿವಾಣ
ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದವು, ಜೊತೆಗೆ ಒಂದು ಕಂಡಿದೆ ಆದರೂ ಕೂಡಾ ಜನರ ಅನಗತ್ಯ ತಿರುಗಾಟ ಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಪೋಲೀಸರು ಎಷ್ಟು ಪ್ರಯತ್ನ ಪಟ್ಟರೂ ಕೂಡಾ ಬೈಕಿನಲ್ಲಿ ಇಬ್ಬರು ಕಾರಿನಲ್ಲಿ ನಾಲ್ಕು ಜನ ಹೀಗೆ ಲಾಕ್ ಡೌನ್ ಅವಧಿಯಲ್ಲಿ ತಿರುಗಾಟ ನಡೆಸುತ್ತಲೇ ಇದ್ದಾರೆ .
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ , ದಿನಸಿ ಸಾಮಾಗ್ರಿಗಳನ್ನು ಪಡೆಯುವ ದೃಶ್ಯಗಳನ್ನು ಕೂಡಾ ನಿತ್ಯ ಕಾಣುತ್ತಿದ್ದೇವೆ.
ಜನ ಸುಧಾರಣೆಯಾಗದ ಹೊರತು ಅಧಿಕಾರಿಗಳ ಕಸರತ್ತು ಪ್ರದರ್ಶನಕ್ಕೆ ಫಲಸಿಗಲ್ಲ.
ಇಂದು ಕೂಡಾ ಬಿಸಿರೋಡು ಪರಿಸರ ದಲ್ಲಿ ರಸ್ತೆ ಯಲ್ಲಿ ವಾಹನಗಳ ಓಡಾಟ ಹೆಚ್ಚು ಇತ್ತು.
ರಸ್ತೆಯ ಬದಿಯ ಲ್ಲಿ ನಿಲ್ಲಿಸಿದ ಕಾರುಗಳೇ ಸಾಕ್ಷಿ.
ಜನರಿಗೆ ಇನ್ನು ಯಾವಾಗಪ್ಪ ಬುದ್ದಿ ಬರೋದು ಅಂತ ಅಧಿಕಾರಿಗಳು ಮಾತ ಮಾಡುತ್ತಿದ್ದಾರೆ.
ರಸ್ತೆಬದಿಯ ಸಂತೆ ವ್ಯಾಪಾರ ಗಳಿಗೂ ಸಿಕ್ಕಿಲ್ಲ ಅಂತ್ಯ.
ಗುಂಪು ಗುಂಪಾಗಿ ತರಕಾರಿ ಹಣ್ಣು ಹಂಪಲುಬ, ಮೀನು ಮಾರಟ ನಡೆಯುತ್ತಲೆ ಇದೆ.
ಕೊರೊನಾ ಹರಡುವ ಬಗ್ಗೆ ಗೊತ್ತಿದ್ದರೂ ಕೂಡ ಅಜಾಗರೂಕತೆಯಿಂದ ವ್ಯಾಪಾರ ನಿರಂತರವಾಗಿ ನಡೆಯುತ್ತಲೇ ಇವೆ.
ಅಂತೂ ಬಂಟ್ವಾಳ ದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇವೆಲ್ಲದಕ್ಕೆ ಕಡಿವಾಣ ಹಾಕಬೇಕಾಗಿದೆ.ಅಧಿಕಾರಿ ವರ್ಗ ಕಾನೂನು ಬಿಗಿಗೊಳಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here