Saturday, April 13, 2024

ಪಡಿತರ ಚೀಟಿ ವಂಚಿತ ಕುಟುಂಬಗಳಿಗೆ ಶಾಸಕರ ವೈಯಕ್ತಿಕ ಅಕ್ಕಿ ನೀಡುವ ವ್ಯವಸ್ಥೆಗೆ ಚಾಲನೆ

ಬಂಟ್ವಾಳ: ತಾಲೂಕಿನ ಗ್ರಾಮ ಪಂಚಾಯತ್ ಕಾರ್ಯಪಡೆಯ ಸಭೆ ನಡೆಸಿದ ಸಂದರ್ಭ ಯಾವುದೇ ಪಡಿತರ ಚೀಟಿ ಹೊಂದಿರದ ಬಡ ಕಟುಂಬಗಳ ಸಮಸ್ಯೆಯು ಶಾಸಕರ ಗಮನೆಕ್ಕೆ ಬಂದಿದ್ದು, ಕೂಡಲೇ ಶಾಸಕರು ಬಂಟ್ವಾಳ ತಾಲೂಕು ಕಾರ್ಯ ನಿರ್ವಾಹಕಾಧಿರಿಯವರನ್ನು ಸಂಪರ್ಕಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿ ಹೊಂದಿರ ಕುಟುಂಬಗಳ ಪಟ್ಟಿ ಮಾಡಿ ನೀಡುವಂತೆ ಸೂಚಿದರು.

ಅದರಂತೆ 2 ಸಾವಿರಕ್ಕೂ ಮಿಕ್ಕಿ ಆಶಕ್ತ ಕುಟುಂಬಗಳ ಪಟ್ಟಿ ಶಾಸಕರಿಗೆ ಸಲ್ಲಿಕೆಯಾಗಿದ್ದು, ಶಾಸಕರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 2 ಸಾವಿರ ಮಿಕ್ಕಿ ಕುಟುಂಬಗಳಿಗೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಶಾಸಕರು ತಮ್ಮ ಕಛೇರಿಯಲ್ಲಿ ಇಂದು ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷ  ದೇವದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಉಪಾಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಉಮೇಶ್ ಅರಳ, ಕಾರ್ತಿಕ್ ಬಲ್ಲಾಳ್, ಸುದರ್ಶನ್ ಬಜೆ, ಪ್ರಮೋದ್ ಅಜ್ಚಿಬೆಟ್ಟು, ಶ್ರೀಕಾಂತ್ ಶೆಟ್ಟಿ ಸಜಿಪ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ನಗ್ರಿ, ಜಯರಾಮ್ ನಾಯ್ಕ್ ಕೊಳ್ನಾಡು, ಪ್ರಕಾಶ್ ಅಂಚನ್, ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.

More from the blog

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...

ಜಮೀನಿನ ವಿಚಾರದಲ್ಲಿ ತಕರಾರು ನಡೆಸಿ ಹಲ್ಲೆ ಪ್ರಕರಣ : ಶಿಕ್ಷೆ ಪ್ರಕಟ

ಬಂಟ್ವಾಳ: ಜಮೀನಿನ ವಿಚಾರದಲ್ಲಿ ತಕರಾರು ಉಂಟಾಗಿ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಿದ ಬಗ್ಗೆ ವರದಿಯಾಗಿದೆ. ದೇವಸ್ಯ ಪಡೂರು ಗ್ರಾಮ,ಕುಟ್ಟಿಕಳ ,ಅಲ್ಲಿಪಾದೆ ಎಂಬಲ್ಲಿ ನೀಲಯ್ಯ ಮೂಲ್ಯ ಹಾಗೂ ಶ್ರೀನಿವಾಸ್ ಪೂಜಾರಿ ರವರಿಗೆ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಆಟವಾಡುತ್ತಾ ಜಮೀನಿನಲ್ಲಿದ್ದ ಬೋರ್‌ವೆಲ್​ಗೆ ಬಿದ್ದ 6 ವರ್ಷದ ಬಾಲಕ

ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ. ಬೋರ್​ವೆಲ್​ಗೆ ಬಿದ್ದ ಬಾಲಕನನ್ನು ರೇವಾ ಜಿಲ್ಲೆಯ ಜಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕಾ ಗ್ರಾಮದ ಮಯಾಂಕ್ ಎಂದು...