Tuesday, October 17, 2023

ಸೆಕ್ಷನ್ ಸಮಯದಲ್ಲಿ ಗುಂಪು ಸೇರಿದವರ ಐದು ಬೈಕ್ ವಶಕ್ಕೆ

Must read

ಬಂಟ್ವಾಳ: ಕೋವಿಡ್ 19 ವಿಚಾರ ಕ್ಕೆ ಸಂಬಂಧಿಸಿದಂತೆ ಸೆಕ್ಷನ್ ಜಾರಿಯಲ್ಲಿದ್ದರೂ ಗುಂಪು ಸೇರಿದ್ದವರ ಐದು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸದ ಘಟನೆ ಬಂಟ್ವಾಳ ನಗರ ಠಾಣಾ ಪೋಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ನಗರ ಪೋಲೀಸ್ ಠಾಣೆ ಎಸ್.ಐ.ಅವಿನಾಶ್ ಹೆಚ್ ಗೌಡ ಅವರು ಸಂಜೆ ಸುಮಾರು ಆರು ಗಂಟೆಯ ಸಮಯಕ್ಕೆ ರೌಂಡ್ಸ್ ನಲ್ಲಿದ್ದ ಸಂದರ್ಭ ತಲಪಾಡಿ ಮಸೀದಿಯ ಬಳಿ ಉದ್ದೇಶಪೂರ್ವಕವಾಗಿ ಸುಮಾರು 6 ರಿಂದ ಎಂಟು ಜನರ ತಂಡ ಗುಂಪು ಸೇರಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಗುಂಪು ಸೇರಿ ಮಾತನಾಡುವುದನ್ನು ಗಮನಿಸಿ ಜೀಪಿನಿಂದ ಇಳಿದು ಹೋಗುತ್ತಿದ್ದಂತೆ ಅವರು ತಮ್ಮ ವಾಹನ ಗಳನ್ನು ಬಿಟ್ಟು ಓಡಿಹೋಗಿದ್ದಾರೆ.
ಸ್ಥಳದಲ್ಲಿ ಸಿಕ್ಕಿದ 5. ದ್ವಿಚಕ್ರ ವಾಹನಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

More articles

Latest article