ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಕುರಿತು ಕೋಮುಪ್ರಚೋದಕ ಬರಹ ಹಾಕಿ ಸಮಾಜ ಸ್ವಾಸ್ಥ್ಯ ಕೆಡವಲು ಪ್ರಯತ್ನಿಸಿದಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡು ಎಚ್ಚರಿಕೆ ಹಾಗೂ ನೋಟೀಸ್ ನೀಡಿ ಕಳುಹಿಸಿದ್ದಾರೆ.

ವಿಟ್ಲ ಕಸಬಾ ಗ್ರಾಮದ ಹೈಸ್ಕೂಲ್ ಶಾಲಾ ಬಳಿ ಕೂಜಪ್ಪಾಡಿ ನಿವಾಸಿ ಜಯಕರ ಆಚಾರ್ಯ ಎಂಬವರು ಪೇಸ್ ಬುಕ್ ಪೇಜ್ ನಲ್ಲಿ ಕೋಮು ಪ್ರಚೋದನೆ ಬರಹ ಬರೆದಿದ್ದರು.

ಅದ್ರಂತೆ ವಿಟ್ಲ ಪೊಲೀಸರು ಆರೋಪಿಯ ಜಾಲನ್ನ ಹಿಡಿದು ಅತನನ್ನು ವಶಕ್ಕೆ ಪಡೆದುಕೊಂಡು ನೋಟೀಸ್ ನೀಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿ, ಪ್ರಚೋದನಕಾರಿ ಬರಹಕ್ಕೆ ಕಾಮೆಂಟ್ ಹಾಕಿದ ವಿಟ್ಲ ಮೂವರನ್ನು ಠಾಣೆಗೆ ಕರೆದುಕೊಂಡು ಬಂದ ಠಾಣೆ ಎಸ್ಸೈ ವಿನೋದ್ ರೆಡ್ಡಿ ಎಚ್ಚರಿಕೆ ನೀಡಿ, ಮುಚ್ಚಲಿಕೆ ಬರೆಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿಟ್ಲ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಫೇಸ್ಬುಕ್ ನಲ್ಲಿ ಆರೋಪಿ ಬರೆದದ್ದೇನು…?
“ಅಲ್ಲಾಹನ ದುಬೈಯಿಂದ ಬಂದವರಿಂದ ಪವಿತ್ರ ಭಾರತದ ನೆಲದಲ್ಲಿ ಕೊರೋನ ವೈರಸ್ ಹರಡುತ್ತಿದೆ. ದುಬೈಯಿಂದ ಕೇರಳಕ್ಕೆ ಬಂದಿರುವ ಎಲ್ಲಾ ಹರಾಮಿ ಮುಲ್ಲಾಗಳಿಗೂ ಕೊರೋನ ವೈರಸ್ ಪಾಸಿಟಿವ್. ಹಿಂದೂಗಳೇ ಯೋಚಿಸಿ ಪವಿತ್ರ ಭಾರತಕ್ಕೆ ಕಂಟಕ ಎಲ್ಲಿಂದ ಸುರುವಾಗುವುದು ಎಂದು. ಏಸು, ಅಲ್ಲಾಹ್ ಇವರಿಂದಲೇ ಭಾರತಕ್ಕೆ ಕಂಟಕ. ಇವರ ಬೇರು ಭಾರತದಲ್ಲಿ ಕಿತ್ತು ಬಿಸಾಕಬೇಕಿದೆ” ಹೀಗೆಂದು ಆರೋಪಿ ಜಯಕರ ಆಚಾರ್ಯ ಕಮೆಂಟ್ ಮಾಡಿದ್ದ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here