


ಬಂಟ್ವಾಳ: ರಾಜ್ಯ ಇಡೀ ಲಾಕ್ ಡೌನ್ ಮಾಡಬೇಕು ಎಂದು ಸರಕಾರ ಅದೇಶ ಮಾಡಿದರೂ ಜನ ಮಾತ್ರ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ.
ಮನೆಯಿಂದ ಯಾರು ಕೂಡ ಹೊರಗೆ ಬರಬೇಡಿ, ಅಗತ್ಯ ವಸ್ತಗಳಿಗೆ ಮಾತ್ರ ಅಂಗಡಿಗೆ ಬನ್ನಿ ಎಂದು ಹೇಳಿದರು ಜನ ರಸ್ತೆಯಲ್ಲಿ ತಿರುಗಾಟ ಕಡಿಮೆಯಾಗಿಲ್ಲ…
ಇಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ವರೆಗೆ ಮಾತ್ರ ಅವಶ್ಯ ಅಂಗಡಿಗಳು ತೆರದಿರುತ್ತದೆ ಅ ಹೊತ್ತಿನಲ್ಲಿ ಸಾಮಾಗ್ರಿಗಳನ್ನು ಖರೀದಿ ಮಾಡಿ ಮನೆಗೆ ಸೇರುವಂತೆ ಜಿಲ್ಲಾಡಳಿತ ಅದೇಶ ಮಾಡಿತ್ತು.
ಆದರೆ ಬಂಟ್ವಾಳ ತಾಲೂಕಿನ ವಿವಿಧ ಕಡೆಯಲ್ಲಿ ಜನ ಮಾತ್ರ ಸಂಜೆಯಾಗುತ್ತಲೆ ಮನೆ ಬಿಟ್ಟು ಪೇಟೆ ಸೇರಿದ್ದರು.
ಜಿಲ್ಲಾಡಳಿತದ ಮಾತಿಗೆ ಬೆಲೆ ಕೊಡದೆ ರಸ್ತೆಗೆ ಬಂದಿದ್ದ ಜನರಿಗೆ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಅವರು ಬೆತ್ತದ ರುಚಿ ತೋರಿಸಿದರು.
ವಿಟ್ಲ ಪೇಟೆ, ಮಾಣಿ, ಉಕ್ಕುಡ ಹಾಗೂ ಬುಡೋಳಿ ಪೇಟೆಯಲ್ಲಿ ಜನ ಸೇರಿದ್ದ ಬಗ್ಗೆ ಮಾಹಿತಿ ಪಡೆದ ಎಸ್.ಐ.ಅವರು ಲಾಠಿ ಬೀಸಿದ್ದಾರೆ.
ಕೊರೊನೊ ವೈರಸ್ ಜಾಗೃತಿಗಾಗಿ ಮನೆ ಬಿಟ್ಟು ತೆರಳದಂತೆ ತಾಲೂಕು ಆಡಳಿತ ಮನವಿ ಮಾಡಿಕೊಂಡರು ಜನರು ಕಿವಿಗೊಡದ ಹಿನ್ನೆಲೆಯಲ್ಲಿ ಲಾಠಿ ಬೀಸಿದ್ದಾರೆ.


