Wednesday, October 18, 2023

“ಕೋರೊನಾ” ಹತೋಟಿ ಹಿನ್ನಡೆಗೆ ಮತ್ತು ಲಾಕ್ ಡೌನ್ ನಿರ್ಲಕ್ಷಕ್ಕೆ ಕಾರಣವಾದ ವಿಧಿಸಿದ ಅತೀ ಸಡಿಲಿಕೆಯ ನಿಯಮಗಳ ಮಾರ್ಪಾಡಿಗೆ ಮನವಿ : ಪ್ರಭಾಕರ ಪ್ರಭು.

Must read

 

” ರಾಜ್ಯದಲ್ಲಿ “ಕೋರೊನಾ ವೈರಾಸ್” ಹತೋಟಿಗೆ ಬಾರದೆ ದಿನದಿಂದ ದಿನಕ್ಕೆ ಹರಡುತ್ತಿರಲು ಮತ್ತು ದೇಶದಾದ್ಯಂತ ಹಾಗೂ ಕರ್ನಾಟಕ ರಾಜ್ಯದ ಹಲವು ಕಡೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಿಸಿದ್ದ  “ಲಾಕ್ ಡೌನ್” ಕ್ರಮವನ್ನು ಜನರು ನಿರ್ಲಕ್ಷ್ಯ ಮಾಡಿ ಎಲ್ಲೆಂದರಲ್ಲಿ ಸಂಚರಿಸಲು ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿಗಳು ಹೊರಡಿಸಿದ ಅತೀ ಸಡಿಲಿಕೆಯ ನಿಯಮಗಳೇ ಮುಖ್ಯ ಕಾರಣ ವಾಗಿದ್ದು ತಕ್ಷಣದಿಂದಲೇ ಸಂಬಂಧಿಸಿದ ಆದೇಶ ಮಾರ್ಪಾಡಿಸಿ ಕನಿಷ್ಠ 8 ದಿನಗಳ ಮಟ್ಟಿಗೆ ರಾಜ್ಯಗಳಲ್ಲಿನ ದಿನಸಿ,ಕಿರಾಣಿ, ಹಾಲಿನ ಅಂಗಡಿ,ತರಕಾರಿ, ಮಾಂಸ,ಮೀನು ವ್ಯಾಪಾರ ಸೇರಿದಂತೆ ಅಂಗಡಿ ಮುಗ್ಗಟ್ಟು ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು.ಯಾವುದೇ ಸಡಿಲಿಕೆ ಮಾಡೊದು ಈ ಸಂದರ್ಭದಲ್ಲಿ ಸರಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್,ಉಳಿಪಾಡಿ, ರವರಲ್ಲಿ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತಾಗ ಬೇಕು ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಯಾವುದೇ ತರಹದ ಇಲಾಖೆಯ ಅಧಿಕಾರಿ ವರ್ಗದವರಿಗೆ ಒತ್ತಡ ಮದ್ಯ ಪ್ರವೇಶ ಸಲ್ಲದು..

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಆಯಾಯ ವ್ಯಾಪ್ತಿಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಾದ “ಭೂತಕ್ಕೆ ಮಾಡುವುದು,ಕೋಲ,ನೇಮ,ಸೀಮಂತ,ಮದುವೆ, ಪೂಜೆ,ಹುಟ್ಟುಹಬ್ಬ ಇತ್ಯಾದಿ ಧಾರ್ಮಿಕ, ಸಾಮಾಜಿಕ ಕೆಲಸ ಕಾರ್ಯ ಗಳನ್ನು ನಿರ್ಬಂಧ ಮಾಡಲು ಜನರೊಂದಿಗೆ ಮಾತುಕತೆ ಮಾಡುವ ಮೂಲಕ ಕೋರೊನಾ ವೈರಾಸ್ ಹತೋಟಿಗೆ ಶ್ರಮಿಸಬೇಕು ಎಂದು ವಿನಂತಿಸಿದ್ದಾರೆ.
ಗುಂಪುಗಳಲ್ಲಿ ಜನ ಸೇರಿದರೆ ಸ್ಥಳೀಯ ಜನರೇ ಒಟ್ಟು ಗೂಡಿ ಸ್ಥಳೀಯವಾಗಿ ಬುದ್ದಿ ಕಲಿಸಬೇಕು.

ವಿದೇಶದಿಂದ ಬಂದವರನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ‌ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರೇ ಜೋರು ಮಾಡಿ ಮನೆಯಲ್ಲಿ ಇರುವಂತೆ ನೋಡಿ ಕೊಳ್ಳಬೇಕು.
ಇಂತಹ ಸಂದರ್ಭಗಳಲ್ಲಿ ಇಲಾಖೆಯ ಅಧಿಕಾರಿ ವರ್ಗದವರಿಗೆ ಕಾಯದೇ… ಸ್ವಯಂ ಪ್ರೇರಣೆಯಿಂದ ಸೇವೆ ಮಾಡಿ ಕೋರೊನಾ ಹತೋಟಿಗೆ ಸಹಕರಿಸ ಬೇಕು..

ಮನು ಕುಲ ಉಳಿಯಬೇಕಾದರೆ ಕನಿಷ್ಠ 20 ದಿನಗಳಲ್ಲಿ ನಾವೆಲ್ಲಾ ಐಶಾರಾಮಿ ಬದುಕು ಬದಿಗೊತ್ತಿ ನಮ್ಮಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕೋರೊನಾ ಮಾಹಾ ಮಾರಿಯನ್ನು ಓಡಿಸೋಣ.ಎಂದೂ ಸಾರ್ವಜನಿಕ ರಲ್ಲಿ ವಿನಂತಿ

ದಿನಾಂಕ 22 ರಂದು ಅದಿತ್ಯವಾರ ಪ್ರಧಾನಿ ನರೇಂದ್ರ ಮೋದಿ ಯಾವರ ಆಶಯದಂತೆ “ಜನತಾ ಕರ್ಪ್ಯೂ” ಗೆ ಬೆಂಬಲಿಸುವ ಮಾದರಿಯಲ್ಲಿ ಎರಡು ವಾರಗಳಲ್ಲಿ ನಾವೆಲ್ಲಾ ಪಾಲಿಸಿದರೆ ಕೋರೊನಾ ವೈರಾಸ್ ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡ ಬಹುದು.

More articles

Latest article