Thursday, October 19, 2023

ತ್ಯಾಜ್ಯ ಸಂಸ್ಕರಿಸಲು ಕಂಚಿನಡ್ಕಕ್ಕೆ ಬಂದರೆ ಪ್ರತಿಭಟಿಸುತ್ತೇವೆ: ಬೇಡಿಕೆ ಈಡೇರಿಸಿ ಸಮಸ್ಯೆ ಬಗೆ ಹರಿಸಿ ಎಂದ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ನಾಸಿರ್

Must read

ಬಂಟ್ವಾಳ: ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೋಮವಾರದಿಂದ ಒಣ ತ್ಯಾಜ್ಯ ಗಳನ್ನು ಸಂಸ್ಕರಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಆದೇಶ ನೀಡಿರುವುದಕ್ಕೆ ನಮ್ಮ‌ ವಿರೋಧವಿದ್ದು, ತ್ಯಾಜ್ಯವಾಹನ ನಮ್ಮ ಗ್ರಾಮಕ್ಕೆ ಬಂದರೆ ತಡೆದು ಪ್ರತಿಭಟಿಸುವುದಾಗಿ ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ತಿಳಿಸಿದ್ದಾರೆ.

ಸಹಾಯಕ ಆಯುಕ್ತರು ಬಂಟ್ವಾಳ ಪುರಸಭೆಯಲ್ಲಿ ಕರೆದ ಸಭೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ನನಗೆ ಸಭೆಗೆ ಬರಲು ಆಹ್ವಾನ ನೀಡಿದ್ದರು, ಸಹಾಯಕ ಆಯುಕ್ತರ ಸಭೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ನಿಯಮ ಬದ್ಧವಾಗಿ ಯಾಕೆ ಕರೆದಿಲ್ಲ ಎಂದು ಪ್ರಶ್ನಿಸಿರುವ ಅವರು, ಸಜೀಪನಡು ಗ್ರಾಮ ಪಂಚಾಯತ್ ಗೆ ಅನ್ಯಾಯವಾಗುತ್ತಿದೆ, ಪುರಸಭೆಯ ದಬ್ಬಾಳಿಕೆ ಬಲಿಯಾಗುತ್ತಿದೆ ಇದರ ವಿರುದ್ಧ ನಾವು ಪ್ರತಿಭಟಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದು ತಿಳಿಸಿದ್ದಾರೆ.
ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9 ಎಕರೆ ಜಮೀನು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮತ್ತು 3 ಎಕರೆ ಜಮೀನು ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಕಸಿದುಕೊಂಡಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ ಅವರು ನಮ್ಮ ಬೇಡಿಕೆಗಳನ್ನು ಪೂರೈಸಿದ ಬಳಿಕ ಘಟಕ ಸ್ಥಾಪನೆ ಮಾಡಲಿ ಎಂದು ಹೇಳಿದ್ದಾರೆ.
ಯಾಕೆ ವಿರೋಧ:
ಈ ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅವರು ಕಾನೂನು ರೀತಿಯಲ್ಲಿ ನೀಡಿರುವ ಭರವಸೆಗಳನ್ನು ನೀಡಲಿ ಅ ಬಳಿಕ ಘಟಕ ಕಾರ್ಯ ಆರಂಭ ಮಾಡಲಿ ಎಂಬುದು ಅವರ ವಾದ .
ಪರಿಸರ ಇಲಾಖೆ ನೀಡಿದ 21 ನಿಬಂಧನೆಗಳನ್ನು ಅವರು ಪಾಲಿಸಲಿ, ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಲಿ, ಅಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಲಿ, ಶಾಲೆ ಅಂಗನವಾಡಿ ಮಸೀದಿ ಗಳಿಗೆ ಸೂಕ್ತವಾದ ವ್ಯವಸ್ಥೆ ಮಾಡಲಿ ಎಂದು ಅವರು ಹೇಳಿದ್ದಾರೆ.

ಸಭೆ ಕರೆಯಲಿ
ಜಿಲ್ಲಾ ಉಸ್ತುವಾರಿ ಸಚಿವರು, ಈ ಭಾಗದ ಶಾಸಕರು ಉಪಸ್ಥಿತಿಯಲ್ಲಿ ಗ್ರಾಮದ ಜನರು, ಸ್ಥಳೀಯ ಗ್ರಾಮ ಪಂಚಾಯತ್ ಅವರನ್ನು ಸೇರಿಸಿ ಜಿಲ್ಲಾಧಿಕಾರಿ ಪ್ರತ್ಯೇಕ ಸಭೆ ನಡೆಸಲಿ ಅಲ್ಲಿ ಸಾಧಕ ಬಾಧಕಗಳ ಚರ್ಚೆ ನಡೆಯಲಿ,  ಬಳಿಕ ಘಟಕದಲ್ಲಿ ಕಸ ಸಂಸ್ಕರಿಸುವಂತೆ ಅವರು ತಿಳಿಸಿದ್ದಾರೆ.
ಪುರಸಭೆಗೆ ತ್ಯಾಜ್ಯ ಹಾಕುವುದೇ ಮುಖ್ಯವಾದರೆ ಪಂಚಾಯತ್ ಗೆ ಗ್ರಾಮದ ಜನರ ಭಾವನೆಗಳು ಮುಖ್ಯ ಅದಕ್ಕೆ ಗ್ರಾಮ ಪಂಚಾಯತ್ ಸ್ಪಂದನೆ ನೀಡಲಿದೆ, ತ್ಯಾಜ್ಯ ಸಂಸ್ಕರಣೆ ಗೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಪುರಸಭೆ ಯವರು ವಿರೋಧ ವನ್ನು ದಿಕ್ಕರಿಸಿ ಕಸ ಸಂಸ್ಕರಿಸಲು ಬಂದರೆ ಉಸ್ತುವಾರಿ ಸಚಿವರಿಗೆ, ಸ್ಥಳೀಯ ಶಾಸಕರಿಗೆ ದೂರು ನೀಡುತ್ತೇವೆ ಬಳಿಕ ಎಲ್ಲಿ ಪ್ರಶ್ನಿಸಿ ಬೇಕು ಅಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

More articles

Latest article