Sunday, October 22, 2023

ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆ

Must read

ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು ಒಂದು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದು, ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಮಾರ್ಚ್ 18ರಂದು ವಿದೇಶದಿಂದ ಬಂದಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೆನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು.

ಮಾರ್ಚ್ 28ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಪರೀಕ್ಷಾ ವರದಿ ಮಾರ್ಚ್ 31ರ ಮಂಗಳವಾರ ಲಭ್ಯವಾಗಿದ್ದು, ಪಾಸಿಟಿವ್ ಎಂಬುವುದಾಗಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇನ್ನು ದ.ಕ. ಜಿಲ್ಲೆಯ ಮಟ್ಟಿಗೆ ಕಳೆದ 3 ದಿನಗಳಿಂದ ನೆಗೆಟಿವ್ ಪ್ರಕರಣಗಳೇ ವರದಿಯಾಗುತ್ತಿತ್ತು. ಇದರಿಂದಾಗಿ ಜನತೆ ಕೂಡ ನಿರಾಳರಾಗಿದ್ದರು. ಆದರೆ, ಇಂದು ಹೊಸದೊಂದು ಪ್ರಕರಣ ವರದಿಯಾಗುವ ಮೂಲಕ ಜನ ಆತಂಕಕ್ಕೆ ಕಾರಣವಾಗಿದೆ.

ಮಂಗಳವಾರ ಲಭ್ಯವಾದ ವರದಿ:
ಒಟ್ಟು ಸ್ಕ್ರೀನಿಂಗ್ ಒಳಪಟ್ಟವರು – 41 ಮಂದಿ
ಮನೆಯಲ್ಲಿ ನಿಗಾದಲ್ಲಿರುವವರು – 5875 ಮಂದಿ
ಇ ಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು – 28 ಮಂದಿ
28 ದಿನಗಳ ನಿಗಾ ಪೂರೈಸಿದವರು – 169 ಮಂದಿ
ಪರೀಕ್ಷೆಗೆ ಒಳಪಡಿಸಿದವರು – 17 ಮಂದಿ
ಇಂದು ಲಭ್ಯವಾದ ಪರೀಕ್ಷಾ ಮಾದರಿಗಳು – 9
ಪಾಸಿಟಿವ್ ವರದಿ – 1
ನೆಗೆಟಿವ್ ವರದಿ – 8

More articles

Latest article