Wednesday, October 18, 2023

ಬಿಸಿರೋಡು ನಗರದ ನಡುವೆಯೇ ಇದೆ ಸೊಳ್ಳೆ ಉತ್ಪಾದನಾ ಕೇಂದ್ರ

Must read

ಬಂಟ್ವಾಳ : ಬಿ.ಸಿ.ರೋಡು ನಗರದ ನಡುವೆಯೇ ಇದೆ ಸೊಳ್ಳೆ ಉತ್ಪಾದನಾ ಕೇಂದ್ರ. ಅದೂ ಬಂಟ್ವಾಳ ಪುರಸಭೆಯ ಆಶ್ರಯದಲ್ಲಿ..!
ಬಂಟ್ವಾಳ ಪುರಸಭೆಯ ಅಧೀನದಲ್ಲಿರುವ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಕಾರ್ಯಾಚರಿಸುತ್ತಿರುವ ವಾಣಿಜ್ಯ ಸಂಕೀರ್ಣದ ಮೇಲ್ಭಾಗದ ಸ್ಥಿತಿ. ಈ ಕಟ್ಟಡದ ಮೇಲ್ಚಾವಣಿಯಲ್ಲಿರುವ ನೀರಿನ ಟ್ಯಾಂಕ್ ಸೋರುತ್ತಿದ್ದು,  ಕಟ್ಟಡದ ಮೇಲಿನ ಥಾರಸಿಯಲ್ಲಿ ಶೇಖರಣೆಯಾಗಿ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಇದೇ ಕಟ್ಟಡದಲ್ಲಿ ಮತ್ತು ಕಟ್ಟಡದ ಆಸುಪಾಸಿನಲ್ಲಿ ಅನೇಕ ಆಹಾರ ಉತ್ಪನ್ನಗಳ ಮಾರಾಟ ಕೇಂದ್ರಗಳಿದ್ದು, ಇದರ ಮೇಲೆ‌ ಪರಿಣಾಮ ಬೀರುವ ಸಾಧ್ಯತೆ ಇದೆ. ಮಾತ್ರವಲ್ಲದೆ ನಿತ್ಯ ಜನನಿಬಿಡ ಪ್ರದೇಶವಾಗಿರುವ ಈ ಸ್ಥಳದಲ್ಲಿ ಅನೇಕ ಕಛೇರಿಗಳೂ ಇದ್ದು, ತಕ್ಷಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಕೊರೊನಾ, ಹಕ್ಕಿ ಜ್ವರದ ಭೀತಿಯಲ್ಲಿ ಜನ ತತ್ತರಿಸುತ್ತಿರುವ ನಡುವೆ ಇಂತಹಾ ಸೊಳ್ಳೆ ಉತ್ಪಾದನಾ ಕೇಂದ್ರಗಳು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತದೆ. ತಾಲೂಕಿನಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ನಿರ್ದೇಶನವನ್ನೂ ನೀಡಿದ್ದಾರೆ. ಆದರೆ
ಪರಿಸರ ಸ್ವಚ್ಛತೆಯ ಪಾಠ ಹೇಳಬೇಕಾದ ಪುರಸಭೆಯೇ ಈ ರೀತಿಯ ನಿರ್ಲಕ್ಷ್ಯ ವಹಿಸುವುದು ಸರಿಯೇ ಎಂಬುದು ಕಟ್ಟಡದ ಆಸುಪಾಸಿನ ನಿವಾಸಿಗಳ ಪ್ರಶ್ನೆ.

More articles

Latest article