Tuesday, October 17, 2023

ಬಿಸಿರೋಡು- ಜಕ್ರಿಬೆಟ್ಟು ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ

Must read

ಬಂಟ್ವಾಳ: ಬಿಸಿರೋಡು ಬ್ರಹ್ಮಶ್ರೀ ನಾರಾಯಣ ಗುರುಮಂದಿರದಿಂದ ಜಕ್ರಿಬೆಟ್ಟು ವರಗೆ ಅಗಲೀಕರಣಗೊಂಡು ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಇಂದು ಆರಂಭವಾಗಿದೆ.
150 ಕೋಟಿ ವೆಚ್ಚದಲ್ಲಿ ಬಿಸಿರೋಡು – ಕೊಟ್ಟಿಗಾರ ರಸ್ತೆಯ ಬಿಸಿರೋಡಿನಿಂದ ಪುಂಜಾಲಕಟ್ಟೆ ವರೆಗೆ 20 ಕಿಮೀ ಉದ್ದದ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಬಿಸಿರೋಡಿನ ಬ್ರಹ್ಮಶ್ರೀನಾರಾಯಣ ಗುರುಮಂದಿರದಿಂದ ಜಕ್ರಿಬೆಟ್ಟು ವರೆಗೆ 4 ಕಿ.ಮೀ ಉದ್ದದ 7.30 ಮೀ ಅಗಲದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಓಷಿಯನ್ ಕನ್ಸಟ್ರಕ್ಸನ್ ಗುತ್ತಿಗೆ ವಹಸಿಕೊಂಡಿದ್ದು, ಕಾಮಗಾರಿ ವೇಗದಿಂದ ಸಾಗುತ್ತಿದೆ. ರಸ್ತೆಯ ಬದಿಯ ಮರಗಳ ತೆರವುಗೊಳಿಸುವ ಹಾಗೂ ನೀರಿನ ಪೈಪ್, ವಿದ್ಯುತ್ ಕಂಬಗಳ ತೆರವು ಕಾರ್ಯಗಳು ಈಗಾಗಲೇ ನಡೆದಿವೆ.


ಮಳೆಗಾಲದಲ್ಲಿ ನೀರು ರಸ್ತೆ ಬದಿಯ ನೀರು ಹರಿದುಹೋಗಲು ಅಲ್ಲಲ್ಲಿ ಸಣ್ಣ ಸಣ್ಣ ಸೇತುವೆಗಳ ಕಾಮಗಾರಿ ನಡೆಯುತ್ತಿದೆ. ರಸ್ತೆಗೆ ಪ್ರಥಮ ಹಂತದ ಜಲ್ಲಿಕಲ್ಲುಗಳನ್ನು ಹಾಕಲಾಗಿತ್ತು. ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಳೆಗಾಲದ ಮೊದಲು ಈ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಗುತ್ತಿಗೆದಾರರು ಮಾಡುತ್ತಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ.

ಪ್ರಸ್ತುತ ಬಿಸಿರೋಡು- ಜಕ್ರಿಬೆಟ್ಟು ವರೆಗೆ ಕಾಂಕ್ರೀಟ್ ಕಾಮಗಾರಿಗೆ ಇಂದು ಮಧ್ಯಾಹ್ನದ ವೇಳೆ ಚಾಲನೆ ನೀಡಲಾಯಿತು. ಮುಂದಿನ 20 ದಿನಗಳಲ್ಲಿ ಕಾಂಕ್ರೀಟ್ ಕಾಮಗಾರಿಯನ್ನು ಮುಗಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಎ.ಇ.ಗಳಾದ ಕೇಶವ ಮೂರ್ತಿ, ಕೀರ್ತಿ ಅಮೀನ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

More articles

Latest article