Thursday, October 26, 2023

ಕೊರೊನಾ ಭೀತಿಯಿಂದ ಬಂದ್ ಆಗುತ್ತದೆ ಎಂಬ ಆತಂಕ: ಅಗತ್ಯ ವಸ್ತುಗಳ ಖರೀದಿಗೆ ಪುಲ್ ರಶ್

Must read

ಬಂಟ್ವಾಳ: ಕೊರೊನಾ ವೈರಸ್ ಎಂಬ ಮಹಾಮಾರಿ ಜನತೆಯಲ್ಲಿ ದಿನೇ ದಿನೇ ಹೆಚ್ಚಿನ ಆತಂಕ ಮೂಡಿಸುತ್ತಿದ್ದು, ಮಾ. 22ರಂದು ಜನತಾ ಕರ್ಫ್ಯೂ ಸೇರಿದಂತೆ ಮುಂದೆ ಇನ್ನಷ್ಟು ದಿನಗಳ ಕಾಲ ಬಂದ್ ಆಗುವ ಆತಂಕದಿಂದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬಂಟ್ವಾಳ ಪೇಟೆ, ಬಿ.ಸಿ.ರೋಡಿನ ಕೆಲವೊಂದು ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಎಂದಿಗಿಂತ ಹೆಚ್ಚಾಗಿಯೇ ಕಂಡುಬಂತು. ಶನಿವಾರ ಕೆಲಸ ಮುಗಿಸಿ ಬಂದ ಜತೆಗೆ ತಮ್ಮ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.

ವಿಶೇಷವೆಂದರೆ ಕೋಳಿ ಅಂಗಡಿಗಳ ಮುಂದೆಯೂ ಹೆಚ್ಚಿನ ಗ್ರಾಹಕರು ಕಂಡುಬಂದರು.ರವಿವಾರ ಬಹುತೇಕ ಮಂದಿ ಕೋಳಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದು, ರವಿವಾರ ಬಂದ್ ಇರುವುದರಿಂದ ಶನಿವಾರ ಸಂಜೆಯೇ ಖರೀದಿಗೆ ಮುಂದಾಗಿದ್ದರು. ಜತೆಗೆ ಧಾರಣೆ ಕುಸಿತವೂ ಹೆಚ್ಚಿನ ಖರೀದಿಗೂ ಕಾರಣವಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

More articles

Latest article