Wednesday, October 18, 2023

ಬಂಟ್ವಾಳ ಸಂಪೂರ್ಣ ಬಂದ್

Must read

ಬಂಟ್ವಾಳ: ಹೆಚ್ಚುತ್ತಿರುವ ಕೊರೊನಾ ಪ್ರಕರಣ ಜಿಲ್ಲೆ ಬಂದ್ ಗೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಇಂದು ಸಂಪೂರ್ಣ ಬಂದ್ ಅಗಿದೆ.

ಆದರೆ ಬೆಳಗ್ಗಿನ ಜಾವ ಮಾತ್ರ ಮಂಗಳೂರು ಮಾರ್ಕೆಟ್ ನಲ್ಲಿ ಜನರು ಎಂದಿನಂತೆ ಕಂಡಿದ್ದು ಮಾತ್ರ ವಿಶೇಷವಾಗಿತ್ತು.

ಬಳಿಕ ಪೋಲೀಸರು ರಸ್ತೆಗಳಿದು ಜನರನ್ನು ತೆರಳುವಂತೆ ಸೂಚಿಸಿದ ಬಳಿಕ ಮಾರ್ಕೆಟ್ ಸಂಪೂರ್ಣ ಸ್ಥಬ್ತವಾಯಿತು.

ಬಂಟ್ವಾಳ ಸಂಪೂರ್ಣ ಬಂದ್
ಬಾರತ ಲಾಕ್ ಡೌನ್ ಅಗಿದ್ದರೂ ಕೂಡ ಜನರಿಗೆ ಅಗತ್ಯವಸ್ತುಗಳಿಗಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಸಡಿಲಿಕೆ ಮಾಡಿದ್ದರು, ಇದನ್ನು ಜನ ತಪ್ಪಾಗಿ ಅರ್ಥೈಸಿ ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ತಿರುಗುವುದು ಹೆಚ್ಚಾಯಿತು.
ಇಂತಹ ಪರಿಸ್ಥಿತಿಯಲ್ಲಿ ಕಂಟ್ರೋಲ್ ಮಾಡುವ ಉದ್ದೇಶದಿಂದ ಜಿಲ್ಲೆಯ ನ್ನು ಸಂಪೂರ್ಣ ಬಂದ್ ಮಾಡಲು ಅದೇಶ ಮಾಡಿದ್ದಾರೆ.

ಬಂಟ್ವಾಳದಲ್ಲಿಯೂ ದಿನಬೆಳಗಾದರೆ ಮಾ.22 ರಿಂದ ಮಾ.27 ರವರೆಗೆ ನಿತ್ಯವೂ ಮಧ್ಯಾಹ್ನ ದವರೆಗೆ ಜನಜಂಗುಳಿ ಇತ್ತು.
ಆದೆ ಮಾದರಿಯಲ್ಲಿ ಇಂದು ಬೆಳಿಗ್ಗೆ ಕೂಡಾ ಜನ ರಸ್ತೆಗೆ ಇಳಿದಿದ್ದರು.ಆದರೆ ಅ ಮೊದಲೇ ರಸ್ತೆಗಳಿದ ಬಂಟ್ವಾಳ ಪೋಲೀಸರು ಜನರಿಗೆ ಬಂದ್ ನ ಬಗ್ಗೆ ಎಚ್ಚರಿಕೆ ನೀಡಿದರು.
ಬಳಿಕವೂ ಬಂದ್ ಮಾಡದ ಅಂಗಡಿ ಗಳಿಗೆ ಧ್ವನಿವರ್ಧಕ ಬಳಸಿ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಬಂದ್ ಮಾಡದ ಅಂಗಡಿ ಮಾಲಕರಿಗೆ ಹಾಗೂ ರಸ್ತೆ ಯಲ್ಲಿ ಅನಾವಶ್ಯಕ ತಿರುಗಿದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

More articles

Latest article