Tuesday, October 17, 2023

ಪಿಕಪ್ ರಿಕ್ಷಾ ಮಧ್ಯೆ ಡಿಕ್ಕಿಯಾಗಿ ಪಿಕಪ್ ಪಲ್ಟಿ: ಐವರಿಗೆ ಗಾಯ

Must read

ಬಂಟ್ವಾಳ: ಪಿಕಪ್ ವಾಹನ ಮತ್ತು ರಿಕ್ಷಾ ಮಧ್ಯೆ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ, ಪಿಕಪ್ ಚಾಲಕ ಸೇರಿದಂತೆ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಬಿಸಿರೋಡಿನಿಂದ ಬಂಟ್ವಾಳ ಕಡೆಗೆ ಸಾಫ್ಟ್ ಡ್ರಿಂಕ್ಸ್ ಗಳನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಬಂಟ್ವಾಳದಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಸರ್ವೀಸ್ ರಿಕ್ಷಾಕ್ಕೆ ಡಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಮಧ್ಯದಲ್ಲಿ ಪಲ್ಟಿಯಾಗಿದೆ.
ಘಟನೆಯಲ್ಲಿ ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್, ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.


ಗಾಯಗೊಂಡವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ರಸ್ತೆಯಲ್ಲಿ ಅಡ್ಡಲಾಗಿ ಪಿಕಪ್ ವಾಹನ ಬಿದ್ದ ಕಾರಣ ಸ್ವಲ್ಪ ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಬಳಿಕ ವಾಹನ ತೆರವುಗೊಳಿಸಲಾಯಿತು.

ರಸ್ತೆಯಲ್ಲಿ ಸೋಡಾ ಬಾಟಲಿ ಚೆಲ್ಲಾಪಿಲ್ಲಿಯಾಗಿತ್ತು. ಸ್ಥಳೀಯ ಯುವಕರು ಸೋಡಾ ಬಾಟಲಿಗಳನ್ನು ತೆರವುಗೊಳಿಸಿದರು. ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ರಾಜೇಶ್ ಕೆವಿ.ಎ.ಎಸ್.ಐ.ಕುಟ್ಟಿ, ಬಾಲಕೃಷ್ಣ, ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌

More articles

Latest article