ಬಿ.ಸಿ.ರೋಡ್ : ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ 19ನೇ ವಾರ್ಷಿಕೋತ್ಸವ ಆದಿತ್ಯವಾರ ನೇರಂಬೋಳು ಸಭಾಭವನದಲ್ಲಿ ನಡೆಯಿತು. ಪುರಸಭಾ ಸದಸ್ಯೆ ಮೀನಾಕ್ಷಿ ಜೆ. ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಟೈಲರ್, ಕಾರ್ಯದರ್ಶಿ ಮಂಜುನಾಥ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಯಾನಂದ ಕುಲಾಲ್ ನೇರಂಬೋಳ್ ವಹಿಸಿದ್ದರು. ಪ್ರಾರ್ಥನೆಯನ್ನು ಪದ್ಮನಾಭ ಮಾಡಿದರು. ಅತಿಥಿಗಳನ್ನು ಮನೋಹರ ಕುಲಾಲ್ ನೇರಂಬೋಳ್ ಸ್ವಾಗತಿಸಿದರು. ರವೀಂದ್ರ ಕುಲಾಲ್ ಧನ್ಯವಾದವಿತ್ತರು. ಕಾರ್ಯಕ್ರಮ ನಿರೂಪಣೆ ಯೊಗೀಶ್ ಪೂಜಾರಿ ನಿರ್ವಹಸಿದರು. ಈ ಸಂದರ್ಭ ಯಕ್ಷಗುರುಗಳಾದ ಯೋಗೀಶ್ ಶರ್ಮ ಇವರಿಗೆ ಸಂಘದ ವತಿಯಿಂದ ಯಕ್ಷಸಾಮ್ರಾಟ್ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಘದ ಮಕ್ಕಳಿಂದ ಸುದರ್ಶನ ಗರ್ವಭಂಗ ಮತ್ತು ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಿತು.