


ಬಂಟ್ವಾಳ: ಬಂಗಾರ ಕಳವು ಪ್ರಕರಣವೊಂದು ಯೂ ಟರ್ನ್ ಹೊಡೆದು ದೂರು ನೀಡಿದವರ ವಿರುದ್ದವೇ ಪ್ರಕರಣ ದಾಖಲಾದ ಪ್ರಸಂಗ ವೊಂದು ವಿಟ್ಲ ಠಾಣೆಯಲ್ಲಿ ನಡೆದಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆಯ ಕಾಂತಡ್ಕ ನಿವಾಸಿ ಶಾಕೀರಾ ಹಾಗೂ ನಿಜಾಮ್ ಹಾಗೂ ಜಲೀಲ್ ಎಂಬವರ ಮೇಲೆ ಶಮೀರ್ ಎಂಬಾತ ದೂರು ನೀಡಿದ್ದಾನೆ.
ಶಾಕೀರಾ ಎಂಬವರ ಮನೆಯಿಂದ ಸುಮಾರು 65 ಸಾವಿರ ರೂ ಮೌಲ್ಯದ ಚಿನ್ನಾಭರಣಗಳು ಕಳವು ನಡೆದಿದೆ ಎಂದು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶಾಕೀರಾ ಅವರು ಡಿ. 30 ರಂದು ಮನೆಯಿಂದ ವಿಟ್ಲ ಪೇಟೆಗೆ ಹೋಗಿಬರುವ ವೇಳೆ ಹಗಲು ಹೊತ್ತಿನಲ್ಲಿ 2.30 ಸುಮಾರಿಗೆ ಮನೆಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ ಕಳ್ಳರು ಕಪಾಟಿನಲ್ಲಿ ಇರಿಸಲಾಗಿದ್ದ ಸುಮಾರು 65 ಸಾವಿರ ರೂ. ಮೌಲ್ಯದ ಚಿನ್ನ ಆಭರಣಗಳ ಕಳವು ನಡೆದಿದೆ ಎಂದು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದರೆ ತನಿಖೆ ಪ್ರಗತಿಯಲ್ಲಿರುವಾಗಲೇ ಶಮೀರ್ ಎಂಬಾತ ವಿಟ್ಲ ಠಾಣೆಗೆ ಬಂದು ನಿಜಾಮ್ ಮತ್ತು ಜಲೀಲ್ ಎಂಬ ಇಬ್ಬರು ಸ್ನೇಹಿತರು ಶಮೀರ್ ಅವರ ಜ್ಯುವೆಲ್ಲರಿ ಶಾಪ್ ಗೆ ಬಂಗಾರದ ವಸ್ತುಗಳನ್ನು ತಂದು ಶಾಕೀರಾ ಎಂಬವರು ಮಾರಟ ಮಾಡಲು ವಸ್ತಗಳನ್ನು ನೀಡಿದ್ದಾರೆ ಎಂದು ಹೇಳಿ ಮಾರಟ ಮಾಡಿದ್ದರು. ಆದರೆ ಈ ಕಳವು ಎಂಬ ನಾಟಕದ ವಿಷಯ ತಡವಾಗಿ ಶಮೀರ್ ಗೆ ಗೊತ್ತಾಗಿ ವಿಷಯ ತಿಳಿದಾಗಲೇ ಇವರು ಠಾಣೆಗೆ ಅಗಮಿಸಿ ಸ್ನೇಹಿತರು ಸೇರಿ ನನ್ನನ್ನು ಮೋಸ ಮಾಡಿ ಬಂಗಾರ ನೀಡಿ ಹಣ ಪಡೆದುಕೊಂಡು ಹೋಗಿದ್ದಾರೆ, ಹಾಗಾಗಿ ಮಹಿಳೆಯ ಮೇಲೆ ಹಾಗೂ ಇಬ್ಬರು ಸ್ನೇಹಿತರ ವಿರುದ್ದ ದೂರು ದಾಖಲಿಸುವಂತೆ ಶಮೀರ್ ದೂರು ನೀಡಿದ್ದಾರೆ.
ಕಳವು ಪ್ರಕರಣ ಎಂದು ನಾಟಕ ಮಾಡಿದ ಮಹಿಳೆ ಮೇಲೆಯೇ ಪ್ರಕರಣ ದಾಖಲಾದರೆ, ಮೋಸಕ್ಕೆ ತಕ್ಕ ಪಾಠವಾಗುತ್ತದೆ.


