ವಿಟ್ಲ: ವಿಟ್ಲ ಅಧ್ಯಾಪಕರ ಸಹಕಾರಿ ಸಂಘ ಇದರ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ನಿರ್ದೇಶಕರುಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ರಾಜೇಂದ್ರ ರೈ ಅಳಿಕೆ, ಸುರೇಶ್ ಕುಮಾರ್ ಪಿ ಎಂ ಕುದ್ಮಾರು, ಇಂದುಶೇಖರ ಮಂಕುಡೆ ಮತ್ತು ಜಯರಾಮ ಹಳೆಯಂಗಡಿ, ಪ್ರೌಢ ಶಾಲಾ ಶಿಕ್ಷಕರ ವಿಭಾಗದಲ್ಲಿ ಕಮಲಾಕ್ಷ ಶಂಭೂರು ಮತ್ತು ರಾಮಕೃಷ್ಣ ರಾವ್ ನರಿಕೊಂಬು, ಪದವಿ ಪೂರ್ವ ಕಾಲೇಜಿನ ಶಿಕ್ಷಕರ ವಿಭಾಗದಲ್ಲಿ ಕೆ ಎನ್ ಗಂಗಾಧರ ಆಳ್ವ, ಪದವಿ/ಸ್ನಾತಕೊತ್ತರ ವಿಭಾಗದಲ್ಲಿ ನವೀನ ಮಂಗಳೂರು, ಬೋಧಕೇತರ/ಐಟಿಐ/ತಾಂತ್ರಿಕ/ವೈದ್ಯಕೀಯ ವಿಭಾಗದಲ್ಲಿ ಪುಷ್ಪರಾಜ್ ಬಿ. ಬಂಟ್ವಾಳ, ಠೇವಣಾತಿ ಶಿಕ್ಷಕರ ವಿಭಾಗದಲ್ಲಿ ಉಮ್ಮರಗಿ ಶರಣಪ್ಪ ಕೆದಿಲ, ನಿವೃತ್ತ ಶಿಕ್ಷರ ವಿಭಾಗದಲ್ಲಿ ಕೆ.ರಮೇಶ್ ನಾಯಕ್ ರಾಯಿ, ಪರಿಶಿಷ್ಟ ಜಾತಿ ವಿಭಾಗದಲ್ಲಿ ಮೋನಪ್ಪ ಕೆ.ಪುಂಜಾಲಕಟ್ಟೆ, ಪರಿಶಿಷ್ಟ ಪಂಗಡ ವಿಭಾಗದಲ್ಲಿ ಸಂಜೀವ ಹೆಚ್. ಬೊಳಂತಿಮೊಗರು, ಮಹಿಳಾ ಮೀಸಲು ವಿಭಾಗದಲ್ಲಿ ಚಿತ್ರಕಲಾ ಕೆ. ಕಟ್ಟತ್ತಿಲ ಮತ್ತು ಅನಿತಾ ಮಿನೇಜಸ್ ಕಣಿಯೂರು, ಹಿಂದುಳಿದ ಪ್ರವರ್ಗ ಎ ವಿಭಾಗದಲ್ಲಿ ನವೀನ ಪಿ.ಎಸ್ ಕೊಡಂಗೆ ಮತ್ತು ಭಾರತಿ ಬ್ರಹ್ಮರಕೊಟ್ಲು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.