ವಿಟ್ಲ: ಬಾರ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಜತೆಗೆ ಗಲಾಟೆಗೆ ಮುಂದಾದ ಗುಂಪೊಂದರ ಹಲವು ಮಂದಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಘಟನೆ ಭಾನುವಾರ ನಡೆದಿದೆ.
ಬೊಬ್ಬೆಕೇರಿಯ ಬಾರ್ ಬಳಿಯಲ್ಲಿ ಬಾರ್ ನಲ್ಲಿ ಮದ್ಯ ಖರೀದಿಸಿ ಬಳಿಕ ಬಿಲ್ ಕೊಡದೆ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಗುಂಪಿನ ಮೇಲೆ ದೂರು ದಾಖಲಿಸಿಕೊಂಡ ಎಸ್ ಐ ವಿನೋದ್ ಎಸ್ ಅವರ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ಆರಂಭಿಸಿ, ಸುಮಾರು 9 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಸ್ವಿಯಾಗಿದ್ದಾರೆ.