ವಿಟ್ಲ: ನೋಡುವಿಕೆ, ಆಲಿಸುವಿಕೆ, ಚಿಂತಿಸುವಿಕೆ ಮತ್ತು ಜೀವನದಲ್ಲಿ ಅಳವಡಿಸುವಿಕೆಯಿದ್ದಾಗ ಸಾಹಿತ್ಯವೇ ಜೀವನವಾಗುವುದು. ಇಂದಿನ ಯುವ ಜನತೆಗೆ ಸಾಹಿತ್ಯವೇ ಔಷಧ. ಆದ್ದರಿಂದ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯದ ಕಡೆಗೆ ಮುಂದಡಿಯಿಡಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಹೇಳಿದರು.
ಅವರು ಕನ್ನಡ ಸಂಘ ವಿಟ್ಲ ಇದರ ವತಿಯಿಂದ ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ನಡೆಸಲಾದ ‘ಸಾಹಿತ್ಯ ಮತ್ತು ಜೀವನ’ ಎಂಬ ವಿಚಾರದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಂಘದ ಅಧ್ಯಕ್ಷ ಬದನಾಜೆ ಶಂಕರನಾರಾಯಣ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಹರಿ ಪಾದೆಕಲ್ಲು ಸ್ವಾಗತಿಸಿದರು. ಜತೆಕಾರ್ಯದರ್ಶಿ ರಾಜಶೇಖರ್ ವಂದಿಸಿದರು. ಸೀತಾಲಕ್ಷ್ಮಿ ವರ್ಮ ನಿರೂಪಿಸಿದರು.