


ವಿಟ್ಲ: ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಿರೀಕ್ಷಕ ಯಲ್ಲಪ್ಪ ಅವರ ವರ್ಗಾವಣೆಯ ಬಳಿಕ ಖಾಲಿ ಉಳಿದಿದ್ದ ಉಪನಿರೀಕ್ಷಕ ಹುದ್ದೆಗೆ ಪ್ರಾಯೋಗಿಕ ತರಬೇತಿಯಲ್ಲಿದ್ದ ವಿನೋದ್ ಎಸ್. ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಮೂಲತಃ ಬಾಗಲಕೋಟೆಯವರಾದ ವಿನೋದ್ ರೆಡ್ಡಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂಬ ಹಂಬಲದಿಂದ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಠಾಣೆಯಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿರುವ, ಅವರು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.


