ವಿಟ್ಲ: ಮನುಷ್ಯ ತನ್ನ ಬದುಕಿನಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ತಾನು ನಡೆದು ಬಂದ ಹಾದಿಯನ್ನು ಒಂದು ಸಲ ಪರಾಂಬರಿಸಿ ನೋಡಿ ತನ್ನಿಂದ ಕೈಲಾದಷ್ಟು ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಕೇಪು ಮೈರ ಶ್ರೀ ದುರ್ಗಾಮಿತ್ರ ವೃಂದದ ವಠಾರದಲ್ಲಿ ನಡೆದ ಕೇಪು ಅಳಿಕೆ ಯಕ್ಷೆತ್ಸವ 2020 ಸಮಾರಂಭದಲ್ಲಿ ತೆಂಕು ಬಡಗಿನ ಪ್ರಸಿದ್ಧ ಸ್ತ್ರಿವೇಷಧಾರಿ ಪ್ರಸಂಗಕರ್ತ ಎಂ ಕೆ. ರಮೇಶ್ ಆಚಾರ್ಯ, ತೆಂಕಿನ ಪ್ರಸಿದ್ಧ ವೇಷಧಾರಿ ಉಬರಡ್ಕ ಉಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುಂಬೈ ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿ. ಆಡಳಿತ ನಿರ್ದೇಶಕ ಕುಸುಮೋದರ ಡಿ. ಶೆಟ್ಟಿ ಅವರು ಮಾತನಾಡಿ, ಏನೇ ಕೆಲಸದ ಒತ್ತಡ ಇದ್ದರೂ ಹುಟ್ಟೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ರೀತಿಯ ಆತ್ಮ ಸಂತೋಷವನ್ನು ನೀಡುತ್ತದೆ. ಶ್ರೀ ದುರ್ಗಾಮಿತ್ರ ವೃಂದ ರಿ. ಮೈರ ಕೇಪು ಮತ್ತು ಅಳಿಕೆ ಯಕ್ಷಮಿತ್ರರು ಕೇಪು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಮ್ಮೆ ಎನಿಸುತ್ತದೆ ಎಂದರು.
ಸನ್ಮಾನಿತರಾದ ಎಂ ಕೆ. ರಮೇಶ್ ಆಚಾರ್ಯ ಹಾಗೂ ಉಬರಡ್ಕ ಉಮೇಶ್ ಶೆಟ್ಟಿ ಮಾತನಾಡಿದರು.
ಯಕ್ಷಮಿತ್ರರು ಕೇಪು ಅಳಿಕೆ ಇದರ ಉಪಾಧ್ಯಕ್ಷರಾದ ವಿಜಯಕುಮಾರ್ ಮೈರ, ರಾಜಶೇಖರ ಶೆಟ್ಟಿ ತಾಳಿಪಡ್ಪು, ಕಾರ್ಯದರ್ಶಿಗಳಾದ ಸತೀಶ್ ಕೇಪು, ಜಿನಚಂದ್ರ ಜೈನ್ ಕುಕ್ಕೆಬೆಟ್ಟು, ಜಗಜೀವನ್ ರಾಮ್ ಶೆಟ್ಟಿ ಶ್ರೀದುರ್ಗಾ ಮಿತ್ರ ವೃಂದದ ಸಂತೋಷ್ ಕರವೀರ, ಶೀನ ನಾಯ್ಕ ಕಲ್ಲಪಾಪು, ಉದ್ಯಮಿಗಳಾದ ಮೋನಪ್ಪ ಕುಲಾಲ್, ಗೋವಿಂದರಾಯ ಶೆಣೈ, ಬಾಲಕೃಷ್ಣ ಪೆಲತ್ತಡಿ, ಶ್ರವಣ್ ಆಚಾರ್ಯ, ವರುಣ್ ಆಚಾರ್ಯ, ಮನೀಷ್ ಮೈರ, ಮಿಥುನ್ ಮೈರ, ಶರತ್ ಮೈರ, ಶಿಸ್ತು ಸಮಿತಿಯ ಮಹಮ್ಮದ್ ಹ್ಯಾರಿಸ್ ಉಪಸ್ಥಿತರಿದ್ದರು.
ಹೈಕೋರ್ಟ್ ನ್ಯಾಯವಾದಿಗಳಾದ ಸುಧಾಕರ ಪೈ, ವೇದವ್ಯಾಸ ಕಾಮತ್ ಮಂಗಳೂರಿನ ವಕೀಲರಾದ ಅರುಣಚಂದ್ರ ಬಂಗೇರ ಉಪಸ್ಥಿತರಿದ್ದರು. ರಘುನಾಥ ಮೈರ ಕಾರ್ಯದರ್ಶಿ ಶ್ರೀ ದುರ್ಗಾಮಿತ್ರವೃಂದ ರಿ. ಮೈರ ಕೇಪು ಉಪಸ್ಥಿತರಿದ್ದರು.
ಶೀನ ನಾಯ್ಕ ಕಲ್ಲಪಾಪು ಹಾಗೂ ವಿಜಯಶಂಕರ್ ಆಳ್ವ ಮಿತ್ತಳಿಕೆ ಸನ್ಮಾನಪತ್ರ ವಾಚಿಸಿದರು. ಅಳಿಕೆ ಶ್ರೀ ಸತ್ಯಸಾಯಿ ಪದವಿಪೂರ್ವ ವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಪೂವಪ್ಪ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ತೇಜಸ್ ಎ.ಕೆ. ಆಶಯಗೀತೆ ಹಾಡಿದರು. ಶ್ರೀದುರ್ಗಾ ಮಿತ್ರವೃಂದದ ಅಧ್ಯಕ್ಷ ಅಶೋಕ್ ಎ. ಇರಾಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ರಾಜೇಶ್ ರೈ ಕಲ್ಲಂಗಳ ಸ್ವಾಗತಿಸಿದರು. ಪುರುಷೋತ್ತಮ ಮೈರ ಕೋಶಾಧಿಕಾರಿ ವಂದಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here