ವಿಟ್ಲ: ಸಂಸ್ಕೃತಿಯನ್ನು ಉಳಿಸುವ ಬಹಳ ದೊಡ್ಡ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ. ಒಡಿಯೂರಿನಲ್ಲಿ ನಡೆದ ತುಳು ಸಮ್ಮೇಳನ, ಶ್ರೀ ಒಡಿಯೂರು ತುಳುನಾಡ್ದ ಜಾತ್ರೆಯಲ್ಲಿ ಕೃಷಿ – ಋಷಿ ಸಂಸ್ಕೃತಿಯ ವಿಮರ್ಶೆ ಉತ್ತಮ ರೀತಿಯಲ್ಲಿ ಮಂಥನಗೊಂಡಿದೆ. ಪ್ರತಿಯೊಬ್ಬರ ತ್ಯಾಗಪೂರ್ಣವಾದ ಸೇವೆಯ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಗುರುವಾರ ಶ್ರೀ ಒಡಿಯೂರು ರಥೋತ್ಸವ – ತುಳುನಾಡ್ದ ಜಾತ್ರೆಯ ಸಂಪನ್ನತೆಗೆ ಸಕ್ರಿಯವಾಗಿ ಸಹಕರಿಸಿದ ಬಂಧುಗಳಿಗೆ – ಸಂಘ ಸಂಸ್ಥೆಗಳಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಡಾ. ವಸಂತ ಕುಮಾರ ಪೆರ್ಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮ ರೈ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಅಧ್ಯಕ್ಷ ಎ. ಸುರೇಶ್ ರೈ, ಹಸಿರುವಾಣಿ ಹೊರೆಕಾಣಿಕೆಯ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಒಡಿಯೂರು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಯು. ಕಿರಣ್, ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಯೋಜನೆಯ ಬಂಟ್ವಾಳ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ವಂದಿಸಿದರು. ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here