ವಿಟ್ಲ: ಊರಿನ ವಿದ್ಯಾಭಿಮಾನಿಗಳಲ್ಲಿ ನಮ್ಮೂರಿನ ಶಾಲೆ ಎಂಬ ಮನೋಭಾವನೆ ಬೆಳೆದಾಗ ಶಾಲೆಯೊಂದು ಸಮಾಜದ ಮಧ್ಯೆ ಪ್ರಕಾಶಿಸಬಹುದು. ಸರಕಾರದ ಯೋಜನೆಗಳು ಸಮರ್ಪಕವಾಗಿ ಮೂಡಿಬರಲು ಸಹ ಸಾರ್ವಜನಿಕ ಸಹಕಾರ ಅವಶ್ಯಕವಾಗಿದೆ.ಕನ್ನಡ ಭಾಷೆಯನ್ನು ಸಮೃದ್ಧವಾಗಿಸುವ ನಿಟ್ಟಿನಲ್ಲಿ ಸರಕಾರಿ ಕನ್ನಡ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಯುವ ಶಕ್ತಿ ಕನ್ನಡದ ಕಡೆಗೆ ಗಮನ ಹರಿಸುವ ಅನಿವಾರ್ಯತೆ ಇದೆ. ಗುಣಾತ್ಮಕ ಶಿಕ್ಷಣ ನೈತಿಕತೆಯೊಂದಿಗೆ ಫಲಿತಾಂಶದ ದೃಷ್ಟಿಯನ್ನಿಟ್ಟುಕೊಂಡು ಸಾಗಬೇಕು. ಇಂತಹ ಸುವರ್ಣ ಸಂಭ್ರಮ ಆಚರಣೆಗಳು ಹೊಸತನವನ್ನು ತರುವ ಕಾರ್ಯವನ್ನು ಮಾಡುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಕುದ್ದುಪದವು ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆ ನಡೆಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಜನರನ್ನು ಸಮಾಜದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ವವ್ಯಾಪ್ತಿ ಸರ್ವ ಶಕ್ತಿಯಾಗಿ ಬೆಳೆಯಲು ಸರ್ಕಾರ ಹಲವು ಯೋಜನೆಗಳನ್ನು ತಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ನಿವೃತ್ತ ಮೇಲ್ವಿಚಾರಕ ಪಿ.ರೇವಣ್ಣ ನಾಯ್ಕ, ಕರ್ತವ್ಯನಿರತ ಮೇಲ್ವೀಚಾರಕಿ ಪ್ರಮೀಳಾ ಹೆಚ್, ಶಿಕ್ಷಕಿ ಭವ್ಯ, ಗೌರವ ಶಿಕ್ಷಕಿಯರಾದ ಗೀತಾ ಕುಮಾರಿ, ತುಳಸಿ, ಕುಸುಮ, ಪುಷ್ಪಾ, ಮಧುರಾ, ಚಂಪಾ, ಐತ್ತಪ್ಪ ನಾಯ್ಕ, ನಳಿನಿ ರೈ, ಶಂಕರಿ, ಪ್ರಮೀಳ, ಕಮಲಾಕ್ಷಿ, ಚೇತನಾ, ಅಡುಗೆ ಸಿಬ್ಬಂದಿಗಳಾದ ಭಾಗೀರಥಿ, ರತ್ನಾ.ಕೆ, ಲೀಲಾ, ನಿವೃತ್ತ ಅಡುಗೆ ಸಿಬ್ಬಂದಿ ಚಂದ್ರಾಕ್ಷಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯೆ ಕವಿತಾ ಸುಬ್ಬ ನಾಯ್ಕ, ಕೇಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನೀ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಅಬ್ದುಲ್ ಕರೀಮ್ ಕುದ್ದುಪದವು, ದಿವ್ಯ ಮೈರ, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್, ವಿಟ್ಲ ಲಯನ್ಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡಿ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ರೈ ಕುಂಡಕೋಳಿ, ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಪೈ ಅಡ್ಯನಡ್ಕ, ಉಪಾಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಗೌರವ ಸಲಹೆಗಾರರಾದ ರೇವಣ್ಣ ನಾಯ್ಕ, ಪುಷ್ಪಾ ಎಚ್., ಕೋಶಾಧಿಕಾರಿ ಎ. ಗೋವಿಂದರಾಯ ಶೆಣೈ ಅಡ್ಯನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಸ್ವಾಗತಿಸಿದರು. ಗೌರವ ಸಲಹೆಗಾರ ರಮೇಶ್ ಎಂ. ಬಾಯಾರು ಪ್ರಸ್ತಾವನೆಗೈದರು. ಆಶ್ರಮ ಶಾಲೆ ಶಿಕ್ಷಕಿ ಭವ್ಯ ಪಿ. ವರದಿ ವಾಚಿಸಿದರು. ಜತೆಕಾರ್ಯದರ್ಶಿ ನಾರಾಯಣ ಕುಲಾಲ್ ಅಮೈ ಸ್ವಸ್ತಿ ವಾಚಿಸಿದರು. ಮೇಲ್ವಿಚಾರಕಿ ಪ್ರಮೀಳಾ ಎಚ್. ವಂದಿಸಿದರು. ಸಮಿತಿ ಕಾರ್ಯದರ್ಶಿ ಎಂ. ಕುಂಞ ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಶೆಟ್ಟಿ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here