ವಿಟ್ಲ: ಮದರಂಗಿ ಪತ್ರಿಕೆ ಈದ್ ಮೀಲಾದ್ ಪ್ರಯುಕ್ತ ಏರ್ಪಡಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮುನೀರಾ ತೊಕ್ಕೋಟು ಪ್ರಥಮ, ಸಹನಾ ಕಾಂತಬೈಲು ಮಡಿಕೇರಿ ದ್ವಿತೀಯ, ನಿಝಾಂ ಪದ್ಮುಂಜ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಹಿದಾಯತ್ ಕಂಡ್ಲೂರಿ ಕುಂದಾಪುರ, ಝು.ಮುಮ್ತಾಝ್, ಅತಾವುಲ್ಲಾ ಇಬ್ರಾಹಿಂ ಉದಯವಾಣಿ ಮೈಸೂರು, ರುಕ್ಸಾನಾ ಫಾತಿಮ ಉಪ್ಪಿನಂಗಡಿ, ಮುಹಮ್ಮದ್ ಕಬೀರ್ ಬಕ್ರವಳ್ಳಿ, ಅಮ್ರೀನ ಉಜಿರೆ, ಅಬೂಶಹೀರ್ ಅಬ್ದುಲ್ ರಝಾಖ್ ಮದನಿ ಕಬಕ, ಎನ್.ಎಸ್.ಶರೀಫ್ ಕೈರಂಗಳ ಅವರ ಪ್ರಬಂಧ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.
ಕವನ ಸ್ಪರ್ಧೆಯಲ್ಲಿ ಮಿಸ್ರಿಯಾ ಇಸ್ಮತ್ ಫಜೀರ್ ಪ್ರಥಮ, ಎನ್.ವಿಶ್ವನಾಥ್ ನೇರಳಕಟ್ಟೆ ದ್ವಿತೀಯ, ರಮ್ಲತ್ ನಂದರಬೆಟ್ಟು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಶಾಕಿರ ಉಪ್ಪಿನಂಗಡಿ, ಸಫ ಕಾರ್ಕಳ, ಎನ್.ಕೆ.ಮುಹಮ್ಮದ್ ಹನೀಫ್ ನಂದರಬೆಟ್ಟು, ಮೊಗೇರಿ ಶೇಖರ ದೇವಾಡಿಗ ಭಟ್ರಮನೆ ಬ್ರಹ್ಮಾವರ, ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು, ರುಕ್ಸಾನಾ ಫಾತಿಮ ಉಪ್ಪಿನಂಗಡಿ, ಜಯಶ್ರೀ ಬೈಲುಪದವು ಪುಣಚ, ರಹ್ಮತ್ ಪುತ್ತೂರು ಯಶ್ವಿತ್, ಅಶೀರುದ್ದೀನ್ ಮಂಜನಾಡಿ, ರಫೀಖ್ ಕಲ್ಕಟ್ಟ, ಗ್ರೀಶ್ಮಾ ಕೆ.ಹೆಚ್.ಕೊಡಿಪ್ಪಾಡಿ ಪುತ್ತೂರು ಅವರ ಕವನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.
ಫೆಬ್ರವರಿ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯುವ ಕವಿಗೋಷ್ಠಿ ಮತ್ತು ಮದರಂಗಿ ಪತ್ರಿಕೆ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಬಹುಮಾನ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಪ್ರಬಂಧ, ಕವನಗಳಿಗೆ ಪ್ರಮಾಣ ಪತ್ರ ಮತ್ತು ಕಿರು ಕಾಣಿಕೆ ನೀಡಿ ಗೌರವಿಸಲಾಗುವುದೆಂದು ಮದರಂಗಿ ಪತ್ರಿಕೆ ಸಂಪಾದಕ ಮಂಡಳಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here