ಬಂಟ್ವಾಳ: ವೀರಕಂಬ ಯುವ ಶಕ್ತಿ ಫ್ರೆಂಡ್ಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದೊಂದಿಗೆ ತೃತೀಯ ವರ್ಷದ ಹಿಂದೂ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ ವೀರಕಂಭ ಗ್ರಾಮ ಪಂಚಾಯತ್ ಬಳಿ ನಡೆಯಿತು. ವೀರಕಂಬ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ನಂದನತಿಮಾರು ಕಾರ್ಯಕ್ರಮ ಉದ್ಘಾಟಿಸಿದರು. ಮಾಣಿ ಕ್ಷೇತ್ರದ ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ, ಯುವಶಕ್ತಿ ಫ್ರೆಂಡ್ಸ್ ಸಂಘಟನೆಯ ಸದಸ್ಯರು ಕ್ರೀಡಾಕೂಟದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವೀರಕಂಭ ಗ್ರಾಮದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿ, ಸಂಘಟನೆಗೆ ತನ್ನ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಾ.ಪಂ. ಸದಸ್ಯೆ ಗೀತ ಚಂದ್ರಶೇಖರ್, ಬಜರಂಗದಳ ಕಲ್ಲಡ್ಕ ವಲಯದ ಮಿಥುನ್ ಪೂಜಾರಿ ಹೊಸಮನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಬ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳ ಕೊಡಿ, ವೀರಕಂಭ ಗ್ರಾ.ಪಂ. ಸದಸ್ಯರಾದ ಜಯಂತಿ ಜನಾರ್ಧನ್ ಅಂಕ ಧಡ್ಕ, ಪದ್ಮಾವತಿ ಗಣೇಶ್ ಕೋಡಿ, ಜಯಂತಿ ನಂದನತಿಮಾರು, ನಿಶಾಂತ್ ರೈ, ಜನಾರ್ಧನ ಪೂಜಾರಿ ಗೊಳಿಮಾರ್, ಕ್ರೀಡಾಂಗಣ ಸ್ಥಳದ ಮಾಲಕ ಕೃಷ್ಣಪ್ಪ ಪೂಜಾರಿ ಗಾಣದಮೂಲೆ, ಪ್ರಗತಿಪರ ಕೃಷಿಕರಾದ ಜಗನ್ನಾಥ್ ಆಲ್ವಾ ಮೈರ, ಮನೀಶ್ ಅಲ್ವಾ ವೀರಕಂಬ, ಯುವಶಕ್ತಿ ಫ್ರೆಂಡ್ಸ್ ಇದರ ಅಧ್ಯಕ್ಷ ಜಗದೀಶ್ ವೀರಕಂಭ ಉಪಸ್ಥಿತರಿದ್ದರು.
ಪಂದ್ಯಾಟದ ಪ್ರಥಮ ಬಹುಮಾನ ವ್ಯೆದ್ಯನಾಥ ವಾರಿಯರ್ಸ್ ಗುರುಪುರ, ದ್ವಿತೀಯ ಬಹುಮಾನ ಟಾಸ್ಕ್ ಬಸವನಗುಡಿ, ತೃತೀಯ ಬಹುಮಾನ ಆದರ್ಶ ಫ್ರೆಂಡ್ಸ್ ಹೋಸ್ ಮಠ ಹಾಗೂ ಚತುರ್ಥ ಬಹುಮಾನವನ್ನು ಷಣ್ಮುಖ ಕೋಲ್ಪೆ ತಂಡಗಳು ಕ್ರಮವಾಗಿ ಪಡೆದುಕೊಂಡವು.