


ಬಂಟ್ವಾಳ: ದಿನಸಿ ಸಾಮಾಗ್ರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಬ ಎಂಬಲ್ಲಿ ನಡೆದಿದೆ.
ವೀರಕಂಬ ಹಮೀದ್ ಎಂಬವರ ದಿನಸಿ ಸಾಮಾಗ್ರಿ ಅಂಗಡಿಗೆ ರಾತ್ರಿ ಸುಮಾರು 9.30 ಗಂಟೆಯ ವೇಳೆಗೆ ಬೆಂಕಿ ತಗುಲಿ ಅಂಗಡಿ ಭಾಗಶಃ ಬೆಂಕಿಗೆ ಆಹುತಿಯಾಯಿತು.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆಯಾ ಅಥವಾ ಯಾವ ಕಾರಣದಿಂದ ಎಂಬುದು ತನಿಖೆಯ ಬಳಿಕವಷ್ಟೆ ತಿಳಿಯಬೇಕಾಗಿದೆ.
ಬಂಟ್ವಾಳ ಅಗ್ನಿಶಾಮಕ ದಳದ ಎರಡು ವಾಹನಗಳು ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಜನರು ಹಾಗೂ ಟ್ಯಾಂಕ್ ರುಗಳ ಮೂಲಕ ಬೆಂಕಿ ನಂದಿಸಲು ನೀರು ಹಾಯಿಸಲಾಗಿದೆ.
ಅಂಗಡಿಗೆ ತಾಗಿಕೊಂಡೆ ಇವರ ಮನೆಯಿರುವುದರಿಂದ ಸ್ವಲ್ಪ ಹೊತ್ತು ಅಂತಕದ ವಾತಾವರಣ ನಿರ್ಮಾಣವಾಯಿತು.
ಸಕಾಲದಲ್ಲಿ ಊರಿನಜನರ ಸಹಕಾರ ಹಾಗೂ ಅಗ್ನಿಶಾಮಕ ದಳವರ ಕಾರ್ಯವೈಖರಿ ಅನಾಹುತ ತಡೆಯಲು ಸಹಕಾರಿ ಯಾಗಿದೆ.
ಆದರೆ ಘಟನೆಯಿಂದ ಯಾವುದೇ ಸಮಸ್ಯೆಗಳು ಅಗದಂತೆ ವಿಟ್ಲ ಠಾಣಾ ಎಸ್.ಐ. ವಿನೋದ್ ಹಾಗೂ ಅವರ ಸಿಬ್ಬಂದಿ ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸೂಕ್ತ ವಾದ ವ್ಯವಸ್ಥೆ ಗಳನ್ನು ಕಲ್ಪಿಸಿದ್ದಾರೆ.
ಘಟನೆಯ ವೇಳೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಬೆಂಕಿ ನಂದಿಸಲು ನೆರವಾದರು.


