ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮ ದೈವ ಪ್ರತಿಷ್ಠೆ, ಚಂಡಿಕಾಯಾಗ ಮತ್ತು ಧರ್ಮನೇಮೋತ್ಸವ ನಡೆಯಲಿರುವ ಒಡ್ಡೂರು ಫಾರ್ಮ್ ಹೌಸ್ ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಫೆ.26 ರಂದು ಬುಧವಾರ ಭೇಟಿ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಉಷಾ ಆರ್. ನಾಯ್ಕ್ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಜಿಲ್ಲಾ ಕೇಂದ್ರ ಸಹಾರಿ ಬ್ಯಾಂಕಿನ ಅಧ್ಯಕ್ಷ ಎಂ.ಯನ್. ರಾಜೇಂದ್ರ ಕುಮಾರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಆಲ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ದೇವ್‌ದಾಸ್ ಶೆಟ್ಟಿ, ಮಂಗಳೂರು ಕ್ಷೇತ್ರ ಸಮಿತಿ ಅದ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಪ್ರಮುಖರಾದ ರವೀಂದ್ರ ಕಂಬಳಿ, ಸಂತೋಷ್ ಕುಮಾರ್ ಬೋಳಿಯಾರ್, ಪ್ರಭಾಕರ್ ಪ್ರಭು, ಸಂದೇಶ್ ಶೆಟ್ಟಿ, ರಂಜಿತ್ ಮೈರ ,ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ರೋನಾಲ್ಡ್ ಡಿ ಸೋಜ, ಡೋಂಬಯ್ಯ ಅರಳ, ನಂದರಾಮ ರೈ, ಮುರಳಿಧರ್ ಶೆಟ್ಟಿ, ವಿನೋದ್ ಮಾಡ, ಭುವನೇಶ್ ಪಚಿನಡ್ಕ, ಚಂದ್ರಹಾಶ ಶೆಟ್ಟಿ ನಾರಳ ಮೊದಲಾದವರು ಉಪಸ್ಥಿತರಿದ್ದರು.