


ವಿಟ್ಲ: ಎಸ್ಸೆಸ್ಸೆಫ್ ಕೊಳಂಬೆ ಶಾಖೆಯ ಮಹಾಸಭೆ ಕೊಳಂಬೆ ಮದ್ರಸ ಹಾಲ್ನಲ್ಲಿ ನಡೆಯಿತು. ನಿಕಟಪೂರ್ವ ಅಧ್ಯಕ್ಷ ಅನ್ಸಾರ್ ಟಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಖಾಸಿಂ ಸಖಾಫಿ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಶಾಹೀರ್ ಕೊಳಂಬೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವೀಕ್ಷಕರಾಗಿ ರಹೀಮ್ ಸಖಾಫಿ, ಮುಖ್ಯ ಅತಿಥಿಯಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 2020-21 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅನ್ಸಾರ್ ಟಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಹೀರ್ ಕೊಳಂಬೆ, ಕೋಶಾಧಿಕಾರಿಯಾಗಿ ಫಾರಿಸ್ ದಾಸರಬೆಟ್ಟು, ಉಪಾಧ್ಯಕ್ಷರುಗಳಾಗಿ ಇಕ್ಬಾಲ್ ಕೊಳಂಬೆ, ಫಾರುಕ್ ದಾಸರಬೆಟ್ಟು , ಜೊತೆ ಕಾರ್ಯದರ್ಶಿಗಳಾಗಿ ಫಯಾಝ್ .ಡಿ, ಸ್ವರೂಫ್ ಡಿ , ಸೆಕ್ಟರ್ ಕೌನ್ಸಿಲರ್ ಗಳಾಗಿ ಶಾಕೀರ್ ಕೊಳಂಬೆ, ರಮೀಝ್ ಟಿ.ಕೆ, ಆಸೀರ್ ಕೊಳಂಬೆ, ಫಾರಿಸ್ ದಾಸರಬೆಟ್ಟು ರವರನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸುವ ಮೂಲಕ ನೂತನ ಪಧಾದಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕೆ.ಸಿ.ಫ್ ಸದಸ್ಯರಾದ ಬಶೀರ್ ಟಿ.ಕೆ ಸಿದ್ದೀಕ್ ಕೊಳಂಬೆ ಅಶ್ರಫ್ ಕೊಳಂಬೆ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸ್ವರೂಫ್ ದಾಸರಬೆಟ್ಟು ವಂದಿಸಿದರು.


