ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಇದರ ಜಂಟಿ ಆಶ್ರಯದಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಕ್ರೀಡಾಂಗಣದಲ್ಲಿ ಹೆಚ್. ವಿ. ಕಮಲೇಶ್ ಪರ್ಯಾಯ ಫಲಕ ಮಂಗಳೂರು ವಿ.ವಿ. ಮಟ್ಟದ ಮಹಿಳೆಯರ ಖೋ ಖೋ ಪಂದ್ಯಾಟ ಫೆಬ್ರವರಿ 5 ಮತ್ತು 6 ರಂದು ಜರಗಿದ್ದು, ಮೂಡಬಿದರೆಯ ಆಳ್ವಾಸ್ ಕಾಲೇಜು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಉ. ಪಾಂತ್ಯದಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜು, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮತ್ತು ಮೂಡಬಿದ್ರೆಯ ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ವಿವೇಕಾನಂದ ಕಾಲೇಜು ತಂಡವನ್ನು ಸೋಲಿಸಿ ಪೈನಲಿಗೇರಿತು. ಪ್ರಾಥಮಿಕ ಹಂತದಲ್ಲಿ 12 ತಂಡಗಳು ಭಾಗವಹಿಸಿ 4 ತಂಡವು ಚಾಂಪಿಯಾನ್ ಹಂತವನ್ನು ಪ್ರವೇಶಿಸಿತು.
ಪ್ರಾಥಮಿಕ ಹಂತದ ಫಲಿತಾಂಶದ ವಿವರ
ಪ್ರಥಮ : ವಿವೇಕಾನಂದಕಾಲೇಜು, ಪುತ್ತೂರು
ದ್ವಿತೀಯ :ಎಸ್.ಆರ್‌ಕಾಲೇಜುರಾಮಕುಂಜ
ತೃತೀಯ : ಸರಕಾರಿ ಪ್ರಥಮದರ್ಜೆಕಾಲೇಜುಜಡೆಕಲ್ಲು, ಪುತ್ತೂರು
ಚತುರ್ಥ :ಸರಕಾರಿ ಪ್ರಥಮದರ್ಜೆ ಮಹಿಳಾಕಾಲೇಜು, ಪುತ್ತೂರು
ಚಾಂಪಿಯಾನ್‌ಶಿಪ್ ಫಲಿತಾಂಶ
ಪ್ರಥಮ : ಆಳ್ವಾಸ್ ಕಾಲೇಜು, ಮೂಡಬಿದರೆ ಮ.ವಿದ್ಯಾಲಯ
ದ್ವಿತೀಯ : ಆಳ್ವಾಸ್ ದೈಹಿಕ ಶಿಕ್ಷಣ ಮೂಡಬಿದರೆ
ತೃತೀಯ : ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವು
ಚತುರ್ಥ : ವಿವೇಕಾನಂದ ಪ್ರಥಮದರ್ಜೆಕಾಲೇಜು ಪುತ್ತೂರು
ಈ ಕ್ರೀಡಾಕೂಟ ಸಮಾರೋಪ ಸಮಾರಂಭ ಫೆ.6 ರಂದು ಜರಗಿದ್ದು, ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಮಂಗಳೂರು ವಿ.ವಿ ಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್‌ ಕುಮಾರ್ ಸಿ. ಕೆ. ಅವರು ಮುಖ್ಯ ಅತಿಥಿಗಳಾಗಿ ಬಹುಮಾನವನ್ನು ವಿತರಿಸಿದರು.

ಸಮಾರಂಭದಲ್ಲಿ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮೋಹನ ದಾಸ್‌ ಗಟ್ಟಿ, ಕಾಲೇಜಿನ ಕೀಡಾಧಿಕಾರಿ ಡಾ.ರಾಧಕೃಷ್ಣ ಹೆಚ್.ಬಿ., ಕ್ರೀಡಾ ಕಾರ್ಯದರ್ಶಿಗಳಾದ ಆಕಾಶ, ಮತ್ತು ಮನವಿ ಅವರು ವೇದಿಕೆಯಲ್ಲಿ ಉಪಸಿತರಿದ್ದರು. ಪ್ರೊ.ಚಂದ್ರಕಾಂತ ಶೆಣೈ ಸ್ವಾಗತಿಸಿ, ಪ್ರೊ. ಕೃಷ್ಣಮೂರ್ತಿ ಅವರು ವಂದಿಸಿದರು. ಕನ್ನಡ ಉಪನ್ಯಾಸಕಿ ರಾಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here