ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೃಭಾಷಾ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸಿದ್ದಕಟ್ಟೆ ಸ.ಪ್ರೌ.ಶಾಲೆಯ ಪದವೀಧರ ಸಹಶಿಕ್ಷಕಿ ಮಮತಾ ಪಿ., ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮಾತೃಭಾಷೆ ತಾಯಿ ಭಾಷೆ, ನಮ್ಮ ಸಂವಹನ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಮಾತೃಭಾಷೆ ಅನಿವಾರ್ಯ. ನಮ್ಮ ಸಂಸ್ಕೃತಿ ಕಲೆ ಹಾಗೂ ಇತಿಹಾಸವು ಸಂಪದ್ಭರಿತವಾಗಲು ಭಾಷೆಯ ಪಾತ್ರ ಹಿರಿದಾದುದು. ನಮ್ಮ ಭಾಷೆ ಸಂಪದ್ಬರಿತವಾಗಬೇಕಾದರೆ ಅದನ್ನು ಬರವಣಿಗೆ ರೂಪಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಜ್ವಲ್ ಸ್ವಾಗತಿಸಿ, ತೃತೀಯ ಬಿಕಾಂ ನ ಮೆಲ್ರಿಯ ವಂದಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿಗಳಾದ ಮನೀಶ್ ಪ್ರಾರ್ಥಿಸಿ, ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ವಿನಾಯ ಎಂ. ಎಸ್. ಕಾರ್ಯಕ್ರಮ ಆಯೋಜಿಸಿದ್ದರು.