ಬಂಟ್ವಾಳ: ಸಿದ್ದಕಟ್ಟೆ ವ್ಯವಸಾಯ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.             ಗುರುವಾರ ಬ್ಯಾಂಕ್ ನ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಬಾಳೆಪುಣಿ ಗ್ರಾ.ಪಂ.ನ ಪಿಡಿಒ ಸುನೀಲ್ ಕುಮಾರ್ ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಸಂದೇಶ್ ಶೆಟ್ಟಿ ಸಂಗಬೆಟ್ಟು, ರಾಜೇಶ್ ಶೆಟ್ಟಿ ಎಲಿಯನಡುಗೋಡು, ದಿನೇಶ್ ಪೂಜಾರಿ ಆರಂಬೋಡಿ, ಮಂದಾರತಿ ಶೆಟ್ಟಿ ಸಂಗಬೆಟ್ಟು, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ ಸಂಗಬೆಟ್ಟು, ಜಾರಪ್ಪ ನಾಯ್ಕ ಕರ್ಪೆ, ವೀರಪ್ಪ ಪರವ ಆರಂಬೋಡಿ, ಪದ್ಮರಾಜ್ ಬಲ್ಲಾಳ್,  ಅರುಣಾ ಸುರೇಶ್ ಶೆಟ್ಟಿ, ದೇವರಾಜ್ ಸಾಲಿಯಾನ್ ಅವರು ಉಪಸ್ಥಿತರಿದ್ದರು.      ಬ್ಯಾಂಕಿನ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಆರತಿ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಗೆ ಗೆಲುವು: ಸಿದ್ದಕಟ್ಟೆ ವ್ಯ.ಸ.ಬ್ಯಾಂಕ್ ಗೆ ಕಳೆದ ವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದರು.
ಒಟ್ಟು 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 10 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 3 ಸ್ಥಾನಕ್ಕಷ್ಠೆ ತೃಪ್ತಿಪಟ್ಟಿದ್ದರು.  ಸಿದ್ದಕಟ್ಟೆ ವ್ಯವಸಾಯ ಸಹಕಾರಿ ಬ್ಯಾಂಕ್  ಸ್ಥಾಪನೆಯಾದ ಬಳಿಕ ಇದೇ ಮೊದಲಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಇಲ್ಲಿ ಜಯಭೇರಿ ಸಾಧಿಸಿ ಪೂರ್ಣಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದೆ. ಈ ಬ್ಯಾಂಕ್ ಬಂಟ್ವಾಳ ಮತ್ತು ಬೆಳ್ತಂಗಡಿ ತಾ.ಗಳ ಒಟ್ಟು 8 ಗ್ರಾಮಗಳ ವ್ಯಾಪ್ರಿಗೊಳಪಟ್ಟು ಕಾರ್ಯಾಚರಿಸುತ್ತಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರ ನೇತೃತ್ವದಲ್ಲಿ ಯುವ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು.ಈ ಸ್ಪರ್ಧೆಯಲ್ಲಿ ತಾಪಂ ಸದಸ್ಯ ಪ್ರಭಾಕರ ಪ್ರಭು ನೇತೃತ್ವದ ತಂಡ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.                                   ಅಭಿನಂದನೆ: ಬ್ಯಾಂಕ್ ನ ನೂತನ ಅಧ್ಯಕ್ಷ ಪ್ರಭಾಕರ ಪ್ತಭು,ಉಪಾಧ್ಯಕ್ಷ ಸತೀಶ್ ಪೂಜಾರಿ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ‌, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಸ್ಥಳೀಯ ಮುಖಂಡ ರತ್ನಕುಮಾರ್ ಚೌಟ ಮತ್ತಿತರರು ಅಭಿನಂದಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here