ವಿಟ್ಲ: ವಿಟ್ಲ ತಾಲೂಕಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಶೌರ್ಯ ದಿವಸ ಯೋಧ ನಮನ ಕಾರ್ಯಕ್ರಮ ಫೆ.26 ರಂದು ಸಂಜೆ 5ಗಂಟೆಗೆ ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಂದೂ ಜಾಗರಣ ವೇದಿಕೆ ಸಂಪರ್ಕ ಪ್ರಮುಖ್, ಪುತ್ತೂರು ಜಿಲ್ಲೆಯ ನರಸಿಂಹ ಶೆಟ್ಟಿ ಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ಅಡ್ಯಂತಾಯ ದಿಕ್ಸೂಚಿ ಭಾಷಣದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಬಾಲಕೋಟ್ ದಾಳಿಯಲ್ಲಿ ಭಾರತೀಯ ಸೈನಿಕರು ತೋರಿದ ಸಾಹಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ನಗರದ ಕಾರ್ಯಕಾರಿಣಿ ಸದಸ್ಯರು ಜಗನ್ನಾಥ್ ಕಾಸರಗೋಡು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಸೈನಿಕರು ಹಾಗೂ ಸಭಾಧ್ಯಕ್ಷತೆ ವಹಿಸಿದ್ದ ನಾರಾಯಣ ಪುರುಷ ಕೇಪು, ಯುವಕರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗಬೇಕು ಹಾಗೂ ಹಿರಿಯರು ಈ ಕುರಿತಂತೆ ಹುರಿದುಂಬಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಗೋವರ್ಧನ್, ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದು ಪರಿಷತ್ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್ ಜತ್ತಪ್ಪ, ವಿಟ್ಲ ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಹರ್ಷ ವಿಠಲ, ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಪೆರ್ನೆ, ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ ಮಣಿ, ಎಬಿವಿಪಿ ಪ್ರಮುಖ ವಿನೋದ್, ಹಿಂದೂ ಜಾಗರಣ ವೇದಿಕೆಯ ತಾಲೂಕು ಉಪಾಧ್ಯಕ್ಷ ರಾಜೇಶ್ ನಾಯಕ್, ಹಿಂದೂ ಜಾಗರಣ ವೇದಿಕೆಯ ವಿಭಾಗ ಸಂಪರ್ಕ್ ಪ್ರಮುಖ್ ರತ್ನಾಕರ ಶೆಟ್ಟಿ, ಟಿ ಕೃಷ್ಣಪ್ಪ, ಸ್ಥಳಾವಕಾಶ ಒದಗಿಸಿದ ವಿಟ್ಲ ಶ್ರೀ ಭಗವತಿ ದೇವಸ್ಥಾನದ ಟ್ರಸ್ಟಿ ಮೋಹನ್ ವಿ. ಮತ್ತಿತರರು ಉಪಸ್ಥಿತರಿದ್ದರು