ಬಂಟ್ವಾಳ: ಕಂಡಕ್ಟರ್ ಒರ್ವ ಯುವತಿಗೆ ಲೈಗಿಂಕ ಕಿರುಕುಳ ನೀಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು, ಈತನಿಗೆ ಶಿಕ್ಷೆಯಾಗುವವರೆಗೆ ಸಂದೇಶ ರವಾನೆ ಮಾಡುವಂತೆ ಬರೆಯಲಾಗಿದೆ.
“ಥೂ ಇವನ ಜನ್ಮಕ್ಕೆ. ಎಂತೆಂತಹ ಕಾಮುಕರಿರುತ್ತಾರೆ ನೋಡಿ. ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾನಂತೆ. ಹೆಣ್ಣುಮಕ್ಕಳ ಪಕ್ಕ ಕುಳಿತು ಮೈ ಕೈ ಮುಟ್ಟಿ ಲೈಂಗಿಕ ಪೀಡನೆ ಮಾಡುತ್ತಾನಂತೆ. ಈ ಕೂಡಲೆ ಇವನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಪೋಲೀಸರು ಕ್ರಮ ಜರಗಿಸುವ ವರೆಗೂ ಶೇರ್ ಮಾಡಿ. ಹೆಣ್ಣು ಮಕ್ಕಳನ್ನು ಇಂತಹ ಪೀಡಕರಿಂದ ರಕ್ಷಿಸಿ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಈ ಘಟನೆ ಎಲ್ಲಿ ನಡೆದಿದೆ ಅನ್ನುವುದು ಸ್ಪಷ್ಟವಾಗಿ ಇಲ್ಲ. ಆದರೆ ಬಸ್ ನ ಹೊರಭಾಗದ ಚಿತ್ರಕೂಡಾ ವೈರಲ್ ಆಗುತ್ತಿದ್ದು ಇದರಲ್ಲಿ ಪುತ್ತೂರು ವಿಭಾಗದ ಬಸ್ ಸಕಲೇಶಪುರ, ಹಾಸನ ಧರ್ಮಸ್ಥಳ ಪುತ್ತೂರು ಎಂಬ ತಲೆ ಬರಹವಿದೆ. ಜೊತೆಗೆ ಬಸ್ ಕಂಡಕ್ಟರ್ ಯುವತಿಗೆ ಪೀಡನೆ ಮಾಡುವ ವೀಡಿಯೋ ಕೂಡಾ ವೈರಲ್ ಅಗಿದೆ.