ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣಗೊಳ್ಳಲಿರುವ ಬಾಲಾಲಯದ ಭೂಮಿ ಪೂಜೆ ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೆರವೇರಿಸಿದರು. ಆಡಳಿತ ಸಮಿತಿಯ ಪ್ರಮುಖರಾದ ಮುಳ್ಳುoಜ ವೆಂಕಟೇಶ್ವರ ಭಟ್ ಕೆ. ರಾಧಾಕೃಷ್ಣ ಆಳ್ವ ಯಶವಂತ ದೇರಾಜೆ ಗುತ್ತು ನಿತಿನ್ ಅರಸ ಭಾಸ್ಕರ ರಾಮ ಕಿಶನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.