ಬಂಟ್ವಾಳ: ಸಜಿಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಮಾ.5,6,7 ಮೂರು ದಿನಗಳಲ್ಲಿ ನಡೆಯಲಿರುವ 8 ನೇ ವರ್ಷದ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆಯ್ಯದ್ ಮುಸ್ತಾಖು್ ರಹ್ಮಾನ್ ತಂಞಲ್ ರ ನೇತ್ರತ್ವದಲ್ಲಿ ನಿನ್ನೆ ದಿನಾಂಕ 16-02-2020 ರಂದು ಸಂಜೆ ನಡೆಯಿತು.
ಚಟ್ಟೆಕಲ್ ಜುಮ್ಮಾ ಮಸೀದಿಯ ಬೃಹತ್ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ 3 ದಿನಗಳ ಕಾಲ ನಡೆಯಲಿದ್ದು, ಮಾ.5 ರಂದು ಕುತಿಬಿಯ್ಯತ್ ಜಿಸ್ತಿಯಾ ನೇತೃತ್ವದ ಮುಹಮ್ಮದ್ ಮದನಿ ಕೋಯಿಕ್ಕೊಡ್, ಮಾ.6 ರಂದು ಬುರ್ದಾ ಮಜ್ಲಿಸ್ ದುಆ ಸಯ್ಯಿದ್ ಜಮಲುಲೈಲಿ ತಂಙಳ್ ಕಡಲುಂಡಿ ನೇತೃತ್ವದ ಉಸ್ತಾದ್ ಅಮೀರ್‍ ಅಲಿ ಜಫಾನಿ ಮಲಪ್ಪುರಂ ಹಾಗೂ ಮಾ.7 ರಂದು ಜಲಾಲಿಯ್ಯ ರಾತೀಬ್ ನೇತೃತ್ವದ ಸಯ್ಯಿದ್ ಶಹೀರ್‍ ತಂಙಳ್ ಮಳ್ಹರ್‍ ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್ ಹಾಗೂ ಪ್ರಭಾಷಣ ಡಾ. ಫಾರೂಕ್ ನಹೀಮಿ ಕೊಲ್ಲಂ ಮಾಡಲಿದ್ದು ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲಾಲಿಯಾ ರಾತೀಬ್ ವಾರ್ಷಿಕ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸ್ವಾಹತ ಸಮಿತಿಗಳನ್ನು ರಚಿಲಾಗಿದ್ದು, ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ, ಉಪಾಧ್ಯಕ್ಷರು ಅಜೀಜ್ ಕಾಪಿಕಾಡ್, ಕರೀಮ್ ಬೊಳ್ಳಾಯಿ, ಕನ್ವೇನರ್‍ ಟಿ.ಕೆ. ಸಾಅದಿ, ಉಪ ಕನ್ವೇನರ್‍ ಲ್ಯುಕ್ ಮ್ಯಾನ್ ಕುಕ್ಕಾಜೆ, ಹರೀಸ್ ಚಟ್ಟೆಕಲ್, ಹಣಕಾಸು ಕರೀಮ್ ಕಾದ್ಕಾರ್‍,
ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ಧಿಕ್ ಕೊಳಕೆ, ಕನ್ವೇನರ್‍ ಮಲಿಕ್ ಕೊಳಕೆ, ಇತರ ಸದಸ್ಯರುಗಳಾದ ಫಾರುಕ್ ಕುಕ್ಕಾಜೆ, ಸಲಾಮ್ ಬೋಲಂತುರು, ಶರೀಫ್ ಮಂಚಿ, ಹಂಸ ಕಾಪಿಕ್ಕಾಡ್, ಸಫ್ವಾನ್ ಬೊಲ್ಲಯಿ, ಇಸಾಕ್ ಬೋಲಿಯರ್‍, ಲತೀಫ್ ವಲವೂರು, ಹನೀಫ್ ಮಸ್ಲೀಯಾರ್‍ ಸಂಪಿಲ, ಅಶ್ರಫ್ ಕಲ್ಲಡ್ಕ, ದಾವೂದ್ ಪಾಣೆಮಂಗಳೂರು, ಇಬ್ರಾಹಿಂ ಆಲಡ್ಕ ಗೋಲಿಪಡ್ಪು, ಸದ್ದಾಂ ಕಾರಜೆ, ಅನ್ಸರ್‍ ಗೂಡಿನಬಳಿ, ಇರ್ಷಾದ್ ಹಾಜಿ, ಅಮ್ಮೆಂಬಳ, ಸಿರಾಜ್ ತುಂಬೆ, ಆದಂ ತುಂಬೆ ಫರಂಗಿಪೇಟೆ, ನಿಝಾಮ್ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here