ಪುಂಜಾಲಕಟ್ಟೆ: ಮೂಡುಪಡುಕೋಡಿ ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಚಿಂತನ್ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ 25ನೇ ಯುರೋ-ಏಷ್ಯಾ ಡಬ್ಲೋ.ಎಫ್.ಎಸ್.ಕೆ.ಓ. ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಸ್ಪರ್ಧಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿರುತ್ತಾರೆ.
ಹೇಮಲತಾ ಮತ್ತು ಯಶೋಧರ ದಂಪತಿಗಳ ಸುಪುತ್ರನಾಗಿರುವ ಇವರು ಕರಾಟೆ ಜನಾಬ್ ಮೊಹಮ್ಮದ್ ನದೀಮ್, ಮೊಹಮ್ಮದ್ ಸರ್ಪ್‌ರಾಝ್ ಮತ್ತು ಮೊಹಮ್ಮದ್ ಶಾಕಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಶಾಲಾ ಸಂಚಾಲಕ ಜನಾಬ್ ಶೇಕ್ ರಹ್ಮತ್ತುಲ್ಲಾ, ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ.ಬಿ. ಹಾಗೂ ಶಿಕ್ಷಕ ವೃಂದ ಇವರ ಸಾಧನೆಯನ್ನು ಶ್ಲಾಘಿಸಿದರು.