ಬಂಟ್ವಾಳ: ಪಶ್ಚಿಮ ವಲಯದ ಜಿಲ್ಲೆಗಳಲ್ಲಿ ಪ್ರಸಕ್ತ ಪ್ರಾಯೋಗಿಕವಾಗಿ ತರಬೇತಿಯಲ್ಲಿರುವ ಪಿಎಸ್ಸೈ (ಸಿವಿಲ್)ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯ ಎಸ್ಸೈ ಆಗಿ ವಿನೋದ್ ಎಸ್., ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ1 ಆಗಿ ಪವನ್ ನಾಯಕ್, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಎಸ್ಸೈ1 ಆಗಿ ರಾಜೇಶ್ ಕೆ.ವಿ., ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಆಗಿ ಸಂತೋಷ್ ಬಿ.ಪಿ., ಪುಂಜಾಲಕಟ್ಟೆ ಠಾಣಾಯ ಅಪರಾಧ ವಿಭಾಗದ ಎಸ್ಸೈ ಅಗಿ ಕುಮಾರ್ ಸಿ. ಕಾಂಬ್ಳೆ.
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಠಾಣೆಯ ಎಸ್ಸೈ ಆಗಿ ಮಹಂತೇಶ್ ಉದಯ್ ನಾಯಕ್, ಭಟ್ಕಳ ನಗರ ಠಾಣೆಯ ಎಸ್ಸೈ ಆಗಿ ಭರತ್ ಕುಮಾರ್ ಬಿ.
ಉಡುಪಿ ಜಿಲ್ಲೆಯ ಹೆಬ್ರಿ ಠಾಣೆಯ ಎಸ್ಸೈ ಆಗಿ ಸುಮಾ ಬಿ., ಬೈಂದೂರು ಠಾಣೆಯ ಎಸ್ಸೈ ಆಗಿ ಸಂಗೀತಾ, ಉಡುಪಿ ನಗರ ಠಾಣೆಯ ಎಸ್ಸೈ ಆಗಿ ಸದಾಶಿವ ರಾಮಪ್ಪ ಗವರೋಜಿ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.