ಬೆಳ್ತಂಗಡಿ : ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಚಂಡಿಕಾ ಯಾಗ ಫೆ.8 ಶನಿವಾರ ಮತ್ತು ಫೆ.9 ಆದಿತ್ಯವಾರ ಜರಗಲಿದೆ.
ಫೆ.8 ರಂದು ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಶ್ರೀ ಚಂಡಿಕಾ ಯಾಗ ಬ್ರಹ್ನಶ್ರೀ ದೇರೆಬೈಲ್ ಶಿವಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ.8 ರಂದು 8.30 ಕ್ಕೆ ಧ್ವಜಾರೋಹಣ, ಪಂಚವಿಂಶಶಿ ಕಲಶಾಭಿಷೇಕ, ಮಧ್ಯಾಹ್ನ 11.45ಕ್ಕೆ ಮಹಾ ಚಂಡಿಕಾ ಯಾಗ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ದೇವರ ಬಲಿ, ಉತ್ಸವ, ಕೊಡಂಗೆತ್ತಾಯ, ಕಲ್ಕುಡ ದೈವಗಳ ನರ್ತನ ಸೇವೆ, ದೈವಗಳ ಭೇಟಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಡಾ. ಪ್ರದೀಪ ಕಾಟುಕುಕ್ಕೆ ನಾವೂರು ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನಂತರ 9.15 ರಿಂದ ವಿಶೇಷ ಆಕರ್ಷಣೆಯೊಂದಿಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ವೈಭವ- ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆ, ದಾಸರ ಪದಗಳ ಸಂಗೀತ ಕಾರ್ಯಕ್ರಮ ಜರಗಲಿದೆ.
ಫೆ.9 ರಂದು ನವಕ ಕಲಶಾಭಿಷೇಕ, ಪ್ರಧಾನ ಹೋಮ, ಮಹಾ ಪೂಜೆ, ತೋರಣ ಧ್ವಜಾರೋಹಣ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ನಂತರ ಮಧ್ಯಾಹ್ನ ಸಾರ್ವಜನಿಕ ಪ್ರಸಾದ ಭೋಜನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here