ಬಂಟ್ವಾಳ: ಗಂಜಿಮಠದ ಒಡ್ಡೂರು ಫಾಮ್೯ಹೌಸ್ ಸ್ಥಳದಲ್ಲಿ ನೂತನವಾಗಿ ನಿರ್ಮಿಸಲಾದ ಒಡ್ಡೂರು ಧರ್ಮಚಾವಡಿಯಲ್ಲಿ ಫೆ.29ರಂದು ನಡೆಯುವ ಶತಚಂಡಿಕಾಯಾಗ ಮತ್ತು ಶ್ರೀಕೊಡಮಣಿತ್ತಾಯ ಧರ್ಮದೈವದ ಧರ್ಮ-ನೇಮೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸಂಪ್ರದಾಯದಂತೆ ವಿವಿಧ ವೈಧಿಕ ವಿಧಿವಿಧಾನಗಳು ಗುರುವಾರ ನೆರವೇರಿತು. ಈ ಸಂದರ್ಭದಲ್ಲಿ ವೇ.ಮೂ.ಎಡಪದವು ವೆಂಕಟೇಶ್ ತಮನತ್ರಿಯವರ ಮಾರ್ಗದರ್ಶದಲ್ಲಿ ವೇ.ಮೂ.ರತೀಶ್ ಭಟ್ ಅವರ ಪೌರೋಹಿತ್ವದಲ್ಲಿ ವಿವಿಧ ಹೋಮಾದಿಗಳ ಸಹಿತ ಮಣ್ಣ,ತೋರಣ, ಬಾಳೆಗೊನೆ ಮುಹೂರ್ತ,ಮರ ಮುಹೂರ್ತದ ಕಟ್ಲೆ ಸಂಪ್ರದಾಯಗಳು ವಿಧಿವತ್ತಾಗಿ ನೆರವೇರಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ದಂಪತಿ ಮತ್ತವರ ಕುಟುಂಬಸ್ಥರು, ಬಿಜೆಪಿ ಮುಖಂಡ ದೇವದಾಸ ಶೆಟ್ಟಿ ಬಂಟ್ವಾಳ, ಚಂದ್ರಹಾಸ ಶೆಟ್ಟಿ ರಂಗೋಲಿ ಬಿ.ಸಿ.ರೋಡ್ ಹಾಗೂ ಅವರ ಹಿತೈಷಿ,ಮಿತ್ರರು, ದೈವದ ಚಾಕರಿದಾರರು ಉಪಸ್ಥಿತರಿದ್ದರು.