ಬಂಟ್ವಾಳ: ಸಿ.ಎ.ಎ. ಎಂಬುದು ಭಾರತಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದವರನ್ನು ವಾಪಾಸು ಕಳುಹಿಸುವ ಉದ್ದೇಶದಿಂದ ಕಾಯ್ದೆ ಜಾರಿ ಮಾಡಲಾಯಿತು. ಆದರೆ ಉದ್ದೇಶ ಪೂರ್ವಕವಾಗಿ ಮಂಗಳೂರಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ ಎಂದರೆ ಇದರ ಹಿಂದೆ ” ಕೈ” ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದರು.‌
ಅವರು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ವೇದವ್ಯಾಸ ಸಭಾಭವನದಲ್ಲಿ ” ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ” ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ನವಭಾರತದ ಪುನನಿರ್ಮಾಣ ಕಾರ್ಯ ದಲ್ಲಿ ನಿಮ್ಮ ಪಾತ್ರ ಇರಲಿ ಕಾರ್ಯಕ್ರಮದ ಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅವರು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.


ಶಾಂತಿಯುತವಾಗಿ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆ, ಅದರೆ ಹಿಂಸಾಚಾರದ ಪ್ರಯಿಭಟನೆಗೆ ಸಂಚು ನಡೆದಿದೆ. ವ್ಯವಸ್ಥಿತವಾಗಿ ವಾಗಿ ಸಂಚಿನ ಮೂಲಕವೇ ನಡೆದಿದೆ, ದೇಶದದಲ್ಲಿ ಅರಾಜಕತೆ ಸೃಷ್ಟಿ ಸುವ ಮೂಲ ಉದ್ದೇಶದಿಂದ ಮಾಡಲಾಗಿದೆ.  ನಿದ್ದೆ ಮಾಡುವವರನ್ನು ಎಬ್ಬಿಸಬಹುದು ನಾಟಕ ಮಾಡುವವರನ್ನು ಏನು ಮಾಡಲಿಕೆ ಸಾಧ್ಯ. ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ನೇರವಾಗಿ ಇದಕ್ಕೆ ಕಾರಣವಾಗಿದ್ದು, ಇತರ ಪಕ್ಷಗಳು ಕೂಡಾ ಅದರ ಜೊತೆ ಸೇರಿಕೊಂಡಿವೆ. ಸಿ.ಎ.ಎ. ಸಂಸತ್ ಸಭೆಯಲ್ಲಿ ಅಂಗೀಕಾರ ವಾಗಿ ಜಾರಿಯಾದ ಕಾಯ್ದೆ. ದೇಶದ ಸೌರ್ವಭಾಮತ್ವವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೌರತ್ವ ಕಾಯ್ದೆ ಎಂಬುದನ್ನು ಮಾಳವಿಕ ಅವಿನಾಶ್ ಹೇಳಿದರು.

ದೇಶದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಮಾತ್ರ ಭಾರತೀಯ ಜನತಾ ಪಾರ್ಟಿ ಕೆಲಸ ಮಾಡುತ್ತಿದೆ, ಭಯ ಬೇಡ ಎಂದು ಅವರು ಅಹೇಳಿದರು. ಪ್ರತಿಯೊಬ್ಬರು ಸಿ.ಎ.ಎ. ಬಗ್ಗೆ ಮಾಹಿತಿ ಪಡೆಯಿರಿ, ಓದಿ ತಿಳಿದುಕೊಳ್ಳಿ ಎಂದು ಅವರು ಕರೆ ನೀಡಿದರು.
ಸಂವಿಧಾನ, ರಾಷ್ಟ್ರ ಕ್ಕೆ ಬದ್ಧವಾಗಿ ಕಾನೂನು ತರಲಾಗಿದೆ, ಯಾವುದೇ ಕಾರಣಕ್ಕೆ ವಾಪಾಸು ಪಡೆಯುವ ಪ್ರಶ್ನೆಯಿಲ್ಲ ಎಂಬುದನ್ನು ಪ್ರಧಾನಿ ಸಾರಿ ಹೇಳಿದ್ದಾರೆ ಎಂದು ಪ್ರತಿಭಟನೆ ಎಷ್ಟು ಸಮಯ ನಡೆಯುತ್ತದೋ ನಡೆಯಲಿ ಎಂದು ಅವರು ಹೇಳಿದರು. ಸಿ.ಎ.ಎ. ವಿರೋಧಿ ಗಳು ಅಂಬೇಡ್ಕರ್ ಬರೆದ ಸಂವಿಧಾನ ವನ್ನು ಓದಲಿ , ಇಂದಿರಾ ಕಾಲದಲ್ಲಿ ತಿದ್ದುಪಡಿ ಅದ ಸಂವಿಧಾನವನ್ನಲ್ಲ ಎಂದು ಅವರು ಒತ್ತಿ ಹೇಳಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here