ಬಂಟ್ವಾಳ: ಜಗತ್ತು ನಿಂತ ನೀರಲ್ಲ, ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ವಿರೋಧಕ್ಕೆ ಸ್ವರ ಗಟ್ಟಿಇರುತ್ತದೆ, ಬೆಂಬಲ ಮೌನವಾಗಿರುತ್ತೆ ಎಂಬ ಕಲ್ಪನೆ ನಮಗಿರಬೇಕು ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಥಮ ದರ್ಜೆ ಮಹಾವಿದ್ಯಾಲಯದ ವೇದವ್ಯಾಸ ಸಭಾಭವನದಲ್ಲಿ ನಡೆದ “ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ಎಂಬ ವಿಷಯದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ “ಸಶಕ್ತ ಭಾರತ: ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ” ಎಂಬ ವಿಚಾರದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು.

2022 ಕ್ಕೆ ಭಾರತಕ್ಕೆ 75 ವರ್ಷ ತುಂಬುತ್ತದೆ, ಈ ಸಂದರ್ಭದಲ್ಲಿ ನವಭಾರತ ನಿರ್ಮಾಣಕ್ಕೆ ಇಡೀ ಸಮಾಜದ ಜನರ ಸಹಕಾರ ಬೇಕಾಗಿದೆ, ಹಾಗಾಗಿ ಇಡೀ ದೇಶದ ಎಲ್ಲಾ ಕುಟುಂಬಗಳಿಗೆ ಉತ್ತಮ ವ್ಯವಸ್ಥೆಯ ಮನೆ, ಶೌಚಾಲಯ, ಗ್ಯಾಸ್ ಸಂಪರ್ಕ, ವಿದ್ಯುತ್, ಇಂಟರ್ನೆಟ್ ಸಿಗುವ ವ್ಯವಸ್ಥೆಗಾಗಿ ಪೂರ್ವ ಯೋಜನೆಗಳನ್ನು ಸರಕಾರ ಹಾಕಿಕೊಂಡು, ತಂತ್ರಜ್ಞಾನದ ಮೂಲಕ ಭ್ರಷ್ಟಾಚಾರ ರಹಿತ ಆಡಳಿತದ ಕನಸು ಮೋದಿಯವರದ್ದು. ಅವರ ಕನಸು ನನಸಾಗಲು ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

ಜಗತ್ತು ಮಹತ್ತರ ಬದಲಾವಣೆಯ ಕಡೆ ಹೆಜ್ಜೆಗಳನ್ನು ಹಾಕುತ್ತಿದೆ. ಜಗತ್ತಿನ ಕಟ್ಟಕಡೆಯ ವ್ಯಕ್ತಿಗಳು ಸೋಲಾರ್ ನಲ್ಲಿ ಜವಬ್ದಾರಿಯುತವಾದ ಉತ್ಪಾದನೆಯಲ್ಲಿ ವಿಶ್ವ ಗುರುವಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವ ಪರಿಸ್ಥಿತಿ ಇರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಮೊಬೈಲ್ ಸಹಿತ, ಆಟೋಮೊಬೈಲ್, ಎಲೆಕ್ಟ್ರಾನಿಕ್ ತಯಾರಿಕಾ ವಸ್ತುಗಳಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಮಹತ್ತರ ಬದಲಾವಣೆ ಬಂದಿದೆ. 100 ಕ್ಕೆ 90 ಪರ್ಸೆಂಟ್ ಮೊಬೈಲ್ ತಯಾರಿಕಾ ಸಂಸ್ಥೆಗಳು ಮೇಕ್ ಇನ್ ಇಂಡಿಯಾ ಆಗಿದೆ. ಇಂದು ಭಾರತದಲ್ಲಿ ಬಹುತೇಕ ವಸ್ತುಗಳು ಮೇಕ್ ಇಂಡಿಯಾ ಆಗಿದೆ. ಇನ್ನು ಮುಂದೆ ಇಡೀ ದೇಶದ ಪ್ರತಿಯೊಂದು ಉತ್ಪಾದನೆಗಳು ಮೇಕ್ ಇಂಡಿಯಾ ಆಗಬೇಕಾಗಿದೆ, ಅಗುತ್ತದೆ ಎಂಬ ದೃಡವಿಶ್ವಾಸವಿದೆ.
ದೇಶದಲ್ಲಿ ನಡೆಯುವ ಎಲ್ಲಾ ಉಪಕ್ರಮಗಳಿಗೆ ನಾಗರಿಕರು ಸಹಕಾರ ನೀಡಿದ್ದಾರೆ. ಉಚಿತದಲ್ಲಿ ಸ್ವಾವಲಂಬಿ ಬದುಕಿನ ಬದಲಾಗಿ ಪರಾವಲಂಭಿಯಾಗಿ ಮಾಡುವುದೇ ಸರಕಾರದ ಉದ್ದೇಶವಾಗಿದೆ. ನಾಗರಿಕರು ಸ್ವಾಭಿಮಾನಿಯಾಗಿ, ಸ್ವಾವಲಂಬಿ ಜೀವನ ಮಾಡಲು ಅವಕಾಶ ನೀಡಬೇಕು. ದೇಶ ಆರ್ಥಿಕವಾಗಿ ಸದೃಢವಾದ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ ಜನರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟಿದೆ.
ಇಡೀ ವ್ಯವಸ್ಥೆಯಲ್ಲಿ ಗೊಣಗುವುದು, ಗೋಳಾಡುವುದು ಬಿಟ್ಟರೆ ಪಾಕಿಸ್ತಾನದ ಬೇರೆ ಏನು ಮಾಡಲು ಸಾಧ್ಯವಿಲ್ಲ, ಅಂತಹ ಸ್ಥಿತಿ ನಿರ್ಮಾಣ ಮಾಡಿದ ಹೆಗ್ಗಳಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು. ‌


ಎಲ್ಲಾ ಸವಾಲುಗಳನ್ನು ಎದುರಿಸಲು ಭಾರತ ಶಕ್ತವಾಗಿದೆ.‌ ನಿರ್ಣಾಯಕವಾದ ನಾಯಕತ್ವ, ಅತ್ಯಂತ ಉಚ್ಚಮಟ್ಟದ ಸಮನ್ವಯತೆ, ಬಲಿಷ್ಠ ಗೂಡಾಚರದ ವ್ಯವಸ್ಥೆ ನಮ್ಮ ದೇಶದಲ್ಲಿ ಇದೆ ಎಂಬುದನ್ನು ಹೆಮ್ಮೆಯಿಂದ ಹೇಳಬಹುದು. ಇಂದು ಸೈನಿಕರ ಬಲದಲ್ಲಿ ಗೆಲುವು ಸಾಧಿಸುತ್ತಿದ್ದೇವೆ, ವ್ಯವಸ್ಥೆಯ ಅಧಾರದಲ್ಲಿ ಅಲ್ಲ, ಆದರೆ ಕೆಲವೇ ವರ್ಷಗಳಲ್ಲಿ ಉತ್ತಮ ಗುಣಮಟ್ಟದ ತಾಂತ್ರಿಕ ಉಪಕರಣಗಳ ಬಲಾಢ್ಯ ವ್ಯವಸ್ಥೆಗೆ ಪೂರಕ ತಯಾರಿಲು ನಡೆಯುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ಸೈನಿಕರಲ್ಲಿ ಆಧುನಿಕ ರೀತಿಯ ಸಾಧನಗಳು ಇವೆಯಾದರೂ ಇನ್ನಷ್ಟು ಉಪಕರಣಗಳ ಜೋಡಣೆ ವ್ಯವಸ್ಥೆ ಗಳು ನಡೆಯುತ್ತಿದೆ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೈಬರ್ ಕ್ರೈಮ್ ಗೆ ಡೇಮಾ ಸೆಕ್ಯುರಿಟಿ ಕಮಿಟಿ ಮಾಡಿದ್ದು, ಭಾರತ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ‌

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here