ಬಂಟ್ವಾಳ: ನಮ್ಮ ಯಾವುದೇ ಕೊಡುಗೆಗಳು ದೇವರ ಹೆಸರಿನಲ್ಲಿ ನಮ್ಮ ಅನುಕೂಲಕ್ಕಾಗಿ ಮಾಡುತ್ತಿದ್ದು, ಭಗವಂತನ ದರ್ಶನ ಮಾಡಿ ಕಣ್ತುಂಬಿಕೊಂಡಾಗ ಶಾಸ್ವತ ಆನಂದ ಪ್ರಾಪ್ತಿಯಾಗುತ್ತದೆ ಎಂದು ಕಾಸರಗೋಡು ಎಡನೀರು ಮಠಾದೀಶರಾದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಜ್ಞಾನ ಮಂದಿರ ಲೋಕಾರ್ಪಣೆ ಬಳಿಕ ಸಭಾಂಗಣ , ಯಜ್ಞ ಮಂಟಪ ಉದ್ಘಾಟನೆ, ಪ್ರತಿಮೆ ಅನಾವರಣ, ಗಜಪ್ರತಿಷ್ಠೆಯ ಉದ್ಘಾಟಿನೆ ನಡೆದ ಬಳಿಕ ಧಾರ್ಮಿಕ ಸಭೆ ಯನ್ನು ದೀಪ ಪ್ರಜ್ವಲಿಸಿ ಆರ್ಶೀವಚನ ನೀಡಿದರು.

ದೇವರಿಗೆ ಮಾಡುವ ಅಲಂಕಾರ ನಮ್ಮ ಹೃದಯ ಮುಟ್ಟುತ್ತದೆ, ಮನಸ್ಸು ಶಾಂತವಾಗುತ್ತದೆ ಎಂದು ಅವರು ಹೇಳಿದರು. ‌ ಶಾಶ್ವತವಾದ ನೆಮ್ಮದಿ ಸಿಗಬೇಕಾದರೆ ಭಗವಂತನ ಆರಾಧನೆ ಮುಖ್ಯವಾಗಿದೆ.
ವರ್ಷದಿಂದ ವರ್ಷಕ್ಕೆ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದು ಸಂತೋಪ ತಂದಿದೆ ಎಂದು ಅವರು ಹೇಳಿದರು.

ಶ್ರೀ ವಿಜಯಲಕ್ಷ್ಮಿ , ಸುಜೀರುಗುತ್ತು ಸಂಜೀವ ಚೌಟ ಸಭಾಂಗಣ ಉದ್ಘಾಟಿಸಿದ
ಶ್ರೀ ಕ್ಷೇತ್ರ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಜ್ಞಾನ, ಬುದ್ದಿ ವೃದ್ದಿಯಾದಾಗ ಸಂಪತ್ತು ವೃದ್ದಿಯಾಗುತ್ತದೆ ಎಂದು ಹೇಳಿದರು. ಧರ್ಮವೇ ಜೀವನ , ಎಚ್ಚರದ ಬದುಕು ನಮ್ಮದಾಗಬೇಕು. ವಿಶ್ವದ ನಂದಾದೀಪ ಭಾರತ, ನಂದಾದೀಪವೇ ಆಧ್ಯಾತ್ಮ.

ಯಜ್ಞ ಮಂಟಪ ಉದ್ಘಾಟಿಸಿದ ಶ್ರೀ ಮಹಾಲಕ್ಷೀ ಕ್ಷೇತ್ರ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ ಅವರು ಸಾಮರಸ್ಯ ಉಳಿದರೆ ಮಾತ್ರ , ಒಂದೇ ಮನಸ್ಸು ಪ್ರೀತಿ ವಿಶ್ವಾಸಗಳ ಶಾಂತಿಯುತ ಬದುಕು ನಮ್ಮದಾಗಬೇಕು
ದೇಶ ಬೇರೆ ಬೇರೆ ಆತಂಕಗಳ ಮಧ್ಯೆ ಭಯದ ವಾತಾವರಣದಲ್ಲಿ ಇದೆ. ನೆಮ್ಮದಿ ಇಲ್ಲದ ಜೀವನದ ಈ ಕಾಲಘಟ್ಟದಲ್ಲಿ ಉತ್ತಮ ಭಾವನೆಗಳು, ಮನಸ್ಸುಗಳು ಕೆಲಸ ಮಾಡಿದಾಗ ಮಾತ್ರ ಉತ್ತಮವಾದ ಬದುಕು ಸಾಧ್ಯ

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಅರ್ಚಕರ ವಿಶ್ರಾಂತಿ ಗೃಹ, ನೈವೇದ್ಯ ಕೊಠಡಿ ಮತ್ತು ವ್ಯವಸ್ಥಾಪನಾ ಕಚೇರಿ ಉದ್ಘಾಟಿಸಿದರು.

ಈಶ್ವರ ಪ್ರತಿಮೆ ಅನಾವರಣ ನಡೆಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ,
ಮಕ್ಕಳ ಮನಸ್ಸು ದೇವರ ಮನಸ್ಸು, ಹೀಗೆ ಪ್ರತಿಯೊಬ್ಬರ ಮನಸ್ಸು ಯಾಕೆ ದೇವರ, ಮಕ್ಕಳ ಮನಸ್ಸು ಯಾಕೆ ಆಗಬಾರದು, ದೇವರಿಗೆ ಪೂಜೆ ಸಲ್ಲಿಸುವ ಜೊತಗೆ ಸಮಾಜ ಉತ್ತಮವಾಗಬೇಕು ಎಂಬ ಹಂಬಲ ನಮಗೆ ಬೇಕಾಗಿದೆ.

ಜಿ.ಪಂ.ಸದಸ್ಯ ರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ ಅವರು ಗಜಪ್ರತಿಷ್ಠೆಗೆ ಮಾಲಾರ್ಪಣೆ ಮಾಡಿದರು.

ವೇದಿಕೆಯಲ್ಲಿ ತಾ.ಪಂ.ಸದಸ್ಯರಾದ ನಸೀಮಾ ಬೇಗಂ, ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್, ಸಜೀಪ ನಡು ಗ್ರಾ.ಪಂ.ಅಧ್ಯಕ್ಷೆ ಉಮಾವತಿ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ , ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾದರ ಭಟ್ ಕೊಳಕೆ, ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಸಭಾಂಗಣ ಕೊಡುಗೆಯಾಗಿ ನೀಡಿದ ರಾಜೇಶ್ ಚೌಟ ಅವರನ್ನು ಗೌರವಿಸಲಾಯಿತು.
ಸಹಕಾರ ನೀಡಿದ ಪುಷ್ಪಾ ಎಸ್ ಹೆಗ್ಡೆ , ಪುಷ್ಪಾವತಿ ಜೆ.ಆಚಾರ್ಯ, ಮೋಹನದಾಸ ಹೊಳ್ಳ, ಅಣ್ಣು ನಾಯ್ಕ
ಅವರನ್ನು ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ವಂದಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here