ಬಂಟ್ವಾಳ: ಮೂರ್ಜೆ, ಪೆಲತ್ತಕಟ್ಟೆಯಲ್ಲಿ 13ನೇ ವರ್ಷದ ಯಕ್ಷಗಾನ ಬಯಲಾಟ ನಡೆಯಿತು.
ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜಪೆ ಇವರ ಕಾರ್ಣಿಕದ ಕಲ್ಲುರ್ಟಿ ಎಂಬ ಪುಣ್ಯ ಕಥಾಭಾಗ ಬಯಲಾಟಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ರವರು ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಬಳಿಕ ಯಕ್ಷಗಾನ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ರಾಜೇಂದ್ರ,ಮೋಹನ್, ದಯಾನಂದ ಶೆಟ್ಟಿ ಅಮೈ ಹಾಗೂ ಮೊದಲಾದವರು ಉಪಸ್ಥಿತರಿದ್ದರು.