ಯಾವುದೇ ಗಿಡ,ಮರ
ಯಾವುದೇ ಪ್ರದೇಶದಲ್ಲಿ
ಕೆಲವೇ ದಿನಗಳಲ್ಲಿ
ಬೆಳೆಯುವಂತೆ
ಮಾಡಿಬಿಟ್ಟ..!
ಹೌದು
ಕೆಲವು ಮರಗಳು ಸಮಶೀತೋಷ್ಣ ವಲಯ, ಉಷ್ಣವಲಯ, ಶೀತವಲಯದಲ್ಲಿ
ಮಾತ್ರ ಬೆಳೆಯುತ್ತಿದ್ದವು..
ಈಗ ಹಾಗಲ್ಲ
ಯಾವ ಮರವಾದರೂ ಎಲ್ಲಿಯಾದರೂ ಬೆಳೆಯಬಹುದು..
ಅದೂ ಕೆಲವೇ ದಿನಗಳಲ್ಲಿ
ಬೆಳೆದು ಹೂ ಹಣ್ಣು
ನೀಡಬಹುದು.
ವಿಜ್ಞಾನಿಗಳು ಅಂತಹ ಬೀಜಗಳನ್ನು ಅಪ್ಡೇಟ್ ಮಾಡಿದ್ದಾರೆ..!
ಕಲ್ಲ ಮಧ್ಯೆ ಒಂದಿಷ್ಟು ನೀರು ಸಿಕ್ಕಿದರೆ ಸಾಕು
ಜೀವ ಬಂದು ಬಿಡುತ್ತಿತ್ತು
ಮರಳಿನಲ್ಲಿ ಬೆಳೆಯಬಹುದು..
ಮನೆಯೊಳಗೂ ಕೃಷಿ ಮಾಡಬಹುದು..
ಆದರೆ ಈ ಅಪ್ಡೇಟ್ ಬೀಜಗಳ
ಒಂದು ಸಮಸ್ಯೆ ತಿಳಿದೇ ಇರಲಿಲ್ಲ..
ಅದು ಮಾನವನ ಹೊಟ್ಟೆಯಲ್ಲೂ ಬೆಳೆಯಬಹುದೆಂದು..
ಹಣ್ಣಿನ ಜೊತೆ ಬೀಜ
ಅಪ್ಪಿ ತಪ್ಪಿ ಹೊಟ್ಟೆ ಸೇರಿದರೆ ಸಾಕು..
ರಾತ್ರಿ ಬೆಳಗಾಗಿ ಎಚ್ಚರ
ಆಗುವ ಹೊತ್ತಿಗೆ
ಮೊಳಕೆ ಬಿಡುತ್ತಿತ್ತು
ಒಂದೆರಡು ದಿನಗಳಲ್ಲಿ ಬೆಳೆಯುತ್ತಿದ್ದವು..
ಡಾಕ್ಟರ್ ನ್ನು ನೋಡುವ ಹೊತ್ತಿಗೆ,
ಮನುಷ್ಯ ಮರವಾಗಿ ಬಿಡುತ್ತಿದ್ದ..!
ಕನಸೋ ನನಸೋ ಯೋಚಿಸುವಷ್ಟು
ಸಮಯವಿರಲಿಲ್ಲ..!
ಈಗ ಯಾವ ಹಣ್ಣ ತಿನ್ನಲು ಭಯ
ಊರೆಲ್ಲ ಇದೇ ಬೀಜಗಳು
ಬೆಳೆದಿತ್ತು.
ಹಣ್ಣು ಕೀಳದೆ ಬಿಟ್ಟರೆ
ಬಿದ್ದ ಹಣ್ಣಿನ ಬೀಜಗಳೆಲ್ಲ
ಮರವಾಗುತ್ತಿತ್ತು.
ಕಡಿಯುವುದೊಂದು ಕೆಲಸ,
ಜೊತೆಗೆ ಬೀಜ ಬೆಳೆಯದಂತೆ
ನೋಡುವ ಕೆಲಸ..!
ಎಷ್ಟು ಅಪ್ಡೇಟ್ ಆಗಬಹುದು..
ಕೊನೆಗೊಂದು ವಿರಾಮ
ಇದ್ದೇ ಇದೆ..!?
✍ಯತೀಶ್ ಕಾಮಾಜೆ