ಇದು
ನೀರಿಲ್ಲದೆ
ಭೂಮಿ ಬರಡಾದ
ಸಂದರ್ಭ..!
ಜಗತ್ತೆಲ್ಲ ಈಗ ಬರಗಾಲ
ಸಮುದ್ರದ ನೀರು ಕೂಡಾ ಆವಿಯಾಗುವಷ್ಟು..!
ಮಳೆ ಭೂಮಿಯನ್ನು ನೋಡದೆ
ವರುಷಗಳೇ ಕಳೆದಿದೆ..
ಇಳೆ ಸುಡುತ್ತಿದೆ..
ಮೋಹಕ ನದಿಗಳು ಎಂದೋ ಬರಿದಾಗಿವೆ..
ನೀರಿನ ಅಭಾವ ಎದುರಿಸುವ
ಕಾಲ ಬರುತ್ತಿದ್ದಂತೆ
ಕೆಲ ಮರುಭೂಮಿ ಹೊತ್ತ ರಾಷ್ಟ್ರಗಳ ನೀರಿನ ಬೇಡಿಕೆ
ಹೆಚ್ಚಾದವು.,
ನೀರಿನ ಬೆಲೆಯೂ ಕೂಡಾ.!
ಸಮುದ್ರ ನೀರನ್ನು
ಕುಡಿಯಲು ಯೋಗ್ಯವನ್ನಾಗಿಸಿ
ಕೆಲವು ರಾಷ್ಟ್ರಗಳು
ನೀರಿನ ವ್ಯಾಪಾರಕ್ಕೆ ನಿಂತವು.
ಎಲ್ಲಾ ಬರಿದಾಗುತ್ತಿದೆ ಎಂದಾಗ
ತಮ್ಮೊಳಗಿನ ಮಿತ್ರತ್ವ ಮರೆತು
ಯುದ್ಧಕ್ಕೆ ನಿಂತು ಬಿಟ್ಟವು.
ಸೋತರೆ ತನ್ನದೇಶಕ್ಕೆ ನೀರು ಕೊಡಬೇಕೆನ್ನುವ ಷರತ್ತಿನ ಒಪ್ಪಂದ
ಸಾಮಾನ್ಯ ಅನಿಸತೊಡಗಿದವು..!
ಕೆಲವು ದೇಶದ
ಸರ್ಕಾರ ಸಾಧ್ಯವಾದಷ್ಟು
ಬೋರ್ ವೆಲ್ ಕೊರೆದು ಬಿಟ್ಟವು..
ದಿನದಿಂದ ದಿನ ನೀರು ಬರಿದಾಯಿತು.
ಪ್ರಪಂಚಾದ್ಯಂತ
ದಾಹದಿಂದ ಸಾವು ಸಾಮಾನ್ಯ ಎನಿಸಿ ಬಿಟ್ಟಿತು.
ಒಂದೊಂದೇ ದೇಶಗಳು ಅಳಿದು ಹೋದವು..
ಇದರ ಜೊತೆಗೆ
ನೀರಿನಿಂದ ಹಣ ಮಾಡಿದವರಿದ್ದರು..
ತಮ್ಮ ಮನೆಯ ಬಾವಿ ಖಾಲಿ ಆಗುವರೆಗೆ ಮಾರಿ
ಕೊನೆಗೆ ತಲೆಗೆ ಕೈ ಇಟ್ಟುಕೊಂಡವರಿದ್ದರು..
ನದಿ ಹಾದು ಹೋದ ದಾರಿಯಲ್ಲೇ ಕೆರೆ ನಿರ್ಮಿಸಿ ಸೋತವರಿದ್ದರು..
ಕೊಳವೆ ಭಾವಿಯಲ್ಲಿ ಬಿಸಿ ನೀರು ಬರುವ ವರೆಗೂ
ಕೊರೆದವರಿದ್ದರು..
ನೀರಿಗಾಗಿ ಬಾವಿ ಹಾರಿದವರೂ ಇದ್ದರು….!
ಈಗ
ಭೂಮಿ ಮರುಭೂಮಿ
ಒಂದೇ ಒಂದು ಗಿಡ ಇಲ್ಲ
ಮನುಷ್ಯನಿಲ್ಲ..
ಅಲ್ಲಲ್ಲಿ ಬಿದ್ದ ಎಲುಬುಗಳು..
ನದಿ,ಬಾವಿ,ಸಮುದ್ರ ಇದ್ದ ಜಾಗದಲ್ಲೇ
ಹೆಚ್ಚು ಹೆಣಗಳ ರಾಶಿ
ನೀರಿಗಾಗಿ ಮಾಡಿದ ಕೊನೆಯ ಪ್ರಯತ್ನಗಳೆಲ್ಲ
ಕಾಣುವಂತಿತ್ತು..!
ಇದ್ದಾಗ ತಿಳಿಯದು
ಅದರ ಬೆಲೆ..!
✍ಯತೀಶ್ ಕಾಮಾಜೆ