


ಜಾತಿ,ಧರ್ಮ, ಬಡವ
ಆಧಾರದ ಮೇಲಿನ ಮೀಸಲಾತಿ
ನಿಲ್ಲಿಸಲಾಯಿತು..!
ಈಗೇನಿದ್ದರು ಗುಣ ನಡತೆ
ನೋಡಿ ನೀಡಲಾಗುತ್ತಿತ್ತು..!?
ಸರಕಾರ ಒಂದು ಕಾರ್ಡ್
ಮಾಡಿದೆ.
ನಡತೆ ಕಾರ್ಡ್..
ನೀವು ಮಾಡಿದ ಒಳ್ಳೆ ಕೆಲಸಕ್ಕೆ
ಇಂತಿಷ್ಟು ಮಾರ್ಕ್
ಒಳಿತು ಮಾಡಿದರೆ ಪ್ಲಸ್.,
ಕೇಡು ಮಾಡಿದರೆ ಮೈನಸ್..
ಅದಕ್ಕೆಂದೆ ಸರಕಾರದ ಆಪ್..
ನಿಮ್ಮ ಒಳ್ಳೆ ಕೆಲಸವನ್ನು
ನೀವೇ ಅಪ್ಡೇಟ್ ಮಾಡಬೇಕು
ಮತ್ತೊಬ್ಬನ ಕೆಟ್ಟ ಕೆಲಸ
ಅಪ್ಡೇಟ್ ಮಾಡಿದರು ಅಂಕ..!
ರಸ್ತೆಯಲ್ಲೊಬ್ಬ ಬಿದ್ದಿದ್ದರೆ
ಎತ್ತಿ ಆಸ್ಪತ್ರೆ ಸೇರಿಸಿದವರೆಗಿನ
ಫೋಟೋ ಮರೆಯದೇ ಅಪ್ಡೇಟ್ ಆಗುವುದು..
ಪ್ರಾಣಿ ಪ್ರೀತಿ
ಗಿಡ ಪ್ರೀತಿ
ಧಾನ ,ಧರ್ಮ ಎಲ್ಲ ಅಪ್ಡೇಟ್..
ಕಾರಣ ಇಷ್ಟೇ
ಹೆಚ್ಚು ಮಾರ್ಕ್ ಬಂದಷ್ಟು
ಮೀಸಲಾತಿ ಹೆಚ್ಚು..
ಉಚಿತ ಆಹಾರ
ಉಚಿತ ಶಿಕ್ಷಣ
ಉಚಿತ ಚಿಕಿತ್ಸೆ
ಹೀಗೆ ಅಂಕಗಳ ಮೇಲೆ ಸರಕಾರಿ ಸೌಲಭ್ಯ..
ಊರಲ್ಲಿ ಯಾರೇ ಬೀಳಲು
ಆರೋಗ್ಯ ಕೆಡಲು
ಓಡೋಡಿ ಸೇವೆ
ಜೊತೆಗಿಷ್ಟು ಫೋಟೋ..
ಈ ಇಳೆಯಲ್ಲಿ
ನಾನೇ ಸಭ್ಯ..
ನನ್ನಿಂದಲೇ ಮಳೆ- ಬೆಳೆ..
ತಾನು ಒಳ್ಳೆಯವನು ಎನಿಸಿಕೊಳ್ಳಬೇಕಾದರೆ
ಉಳಿದವರನ್ನು ಕೆಟ್ಟವರಾಗಿಸುವುದು ಮುಖ್ಯ..!
“ಬಲಗೈಯಲ್ಲಿ ಕೊಟ್ಟದ್ದು
ಎಡಗೈಗೆ ತಿಳಿಯಬಾರದು”
ಈ ಗಾದೆ ಆಪ್ಲಯ್ ಆಗಲ್ಲ ಅಷ್ಟೇ..!?
✍ಯತೀಶ್ ಕಾಮಾಜೆ


