ಊರೆಲ್ಲ
ಹೃದಯಘಾತ ಆಗುತ್ತಿರುವುದನ್ನು ಕಂಡು
ಕಂಡು ಹಿಡಿದದ್ದು
ಇಲೆಕ್ಟ್ರಾನಿಕ್ ಹೃದಯವನ್ನು…!

ಹೃದಯ ವೀಕ್ ಆಗಿದೆಯಾ,
ಆಗುವ ಭಯವಿದೆಯಾ
ಬಿಟ್ಟು ಬಿಡಿ ಚಿಂತೆ
ನಮ್ಮಲ್ಲಿದೆ ಇಲೆಕ್ಟ್ರಾನಿಕ್ ಹೃದಯ
ತಿಂಗಳಿಗೊಮ್ಮೆ ರೀಚಾರ್ಜ್‌ ಮಾಡಿ
ನೀವು ಸತ್ತರು ಈ ಹೃದಯ ಸಾಯಲ್ಲ..!

ಹಾರ್ಟ್ ಅಟ್ಯಾಕ್ ಆಗುವ
ಭಯವಿಲ್ಲ..
ಏರಿಳಿತ ಇಲ್ಲ
ಕಾಲಿಗೆ ಸುಸ್ತಾದರು ಹೃದಯಕ್ಕೆ ಸುಸ್ತಾಗದು..
ಹೃದಯದ ತೊಂದರೆಯೇ ಇಲ್ಲ..
ಜೋಡಣೆ ಮಾಡಿಸಿ ಕೊಂಡವರಿಗೆ
ಭಯವೇ ಇಲ್ಲ
ಇಷ್ಟಕ್ಕೂ
ಭಯವನ್ನುವುದೇ ಇಲ್ಲ
ಈ ಹೃದಯಕ್ಕೆ..

ಹೃದಯದೊಳಗೆ
ಪ್ರೀತಿಗೆ,ಕರುಣೆಗೆ,ನೋವಿಗೆ
ಜಾಗ ಇರಿಸಲಿಲ್ಲ.
ಇಟ್ಟರೆ ಹೃದಯ ಕೆಟ್ಟು ಹೋಗುವ
ಸಾಧ್ಯತೆ ಇದೆ..!

ಬನ್ನಿ
ನಿಮ್ಮ ಹೃದಯವನ್ನು
ಮೆಶಿನ್ ಹಾರ್ಟ್ ಮಾಡಿಸಿ..!

ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here