ಮುಂಬಯಿ: ಸರಕಾರಿ ಮೆಡಿಕಲ್ ಕಾಲೇಜು ಬೈಕುಲಾದ ಪ್ರತಿಭಾನ್ವಿತ ವಿದ್ಯಾಥಿನಿ ಮುಂಬಯಿನ ಜೆ.ಜೆ ಹಾಸ್ಪಿಟಲ್ನ ಮೆಡಿಕಲ್ ಕಾಲೇಜ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಡಾ. ಸುಷ್ಮಾ ಸಿ. ಪೂಜಾರಿ ಅವರು ಎಂಬಿಬಿಎಸ್ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಮೂಲತಃ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನೆಲೆಕುಮೇರಿ ಕುಕ್ಕಿಪಾಡಿ ಗ್ರಾಮದ ನಿವಾಸಿ (ಸದ್ಯ ಮುಂಬಯಿ ಉಪನಗರದ ಭಿವಂಡಿಯಲ್ಲಿ ಸಣ್ಣ ಟೈಲರ್ ವೃತ್ತಿ ನಡೆಸುತ್ತಿರುವ) ಚಂದ್ರಶೇಖರ ಪೂಜಾರಿ ಮತ್ತು ಕಾರ್ಕಳ ತಾಲೂಕು ಮುದ್ರಾಡಿ ಲಕ್ಷ್ಮೀ ಸಿ.ಪೂಜಾರಿ ದಂಪತಿ ಸುಪುತ್ರಿ ಆಗಿದ್ದಾರೆ.