ಬಂಟ್ವಾಳ: ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ) ಸರಪಾಡಿ ಇದರ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ನಡೆದ ಚುಣಾವಣೆಯಲ್ಲಿ ಸಹಕಾರಿ ಧುರೀಣ ದಿ.ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರ ಅಭಿಮಾನಿ ಬಳಗದ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ಗೋಪಾಲಶೆಟ್ಟಿ, ರಾಧಕೃಷ್ಣ ಮಯ್ಯ, ಧನಂಜಯ ಶೆಟ್ಟಿ, ಜೋಕಿಂ ಪಿಂಟೋ, ಕೃಷ್ಣಪ್ಪ,ನಾಣ್ಯಪ್ಪ ಪೂಜಾರಿ, ತಿಲಕ ಬಂಗೇರ, ದಯಾನಂದ ಶೆಟ್ಟಿ,ಪ್ರೇಮ ವಿ.ಶೆಟ್ಟಿ, ವಸಂತಿ, ವಿಶ್ವನಾಥ ನಾಯ್ಕ್, ನಿಶಾಂತ್ ಕುಮಾರ್ ಶೆಟ್ಟಿ.ಕೆ ಅವರು ಪ್ರಚಂಡ ಗೆಲುವು ಸಾಧಿಸಿದ್ದು, ಗಿರಿಧರ್ ನಾಯ್ಕ್ ಮಠಂತಬೆಟ್ಟು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ನಿಬಂಧಕರ ಕಚೇರಿಯ ತ್ರಿವೇಣಿ ರಾವ್ ಕೆ. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ವಿಜೇತ ಅಭ್ಯಥಿಗಳೆಲ್ಲರು ಬಿಜೆಪಿ ಬೆಂಬಲಿತರಾಗಿದ್ದಾರೆ. ಸಹಕಾರಿ, ಬಿಜೆಪಿ ಮುಖಂಡರಾಗಿದ್ದ ದಿವಂಗತ ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರು ಮಣಿನಾಲ್ಕೂರು ಸೇ.ಸ.ಸಂಘದ ಅಭಿವೃದ್ದಿಯ ರೂವಾರಿಯಾಗಿದ್ದರು. ಇವರ ಪುತ್ರ ಧನಂಜಯ ಶೆಟ್ಟಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿದ್ದು, ಎಲ್ಲಾ 13 ಸ್ಥಾನದಲ್ಲು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.